ಅತ್ಯಾಚಾರಿಗಳಿಗೆ ಉಗ್ರಶಿಕ್ಷೆ ನೀಡಲು ಪ್ರಗತಿಪರ ಸಂಘಟನೆಗಳ ಒಕ್ಕೂಟ ಒತ್ತಾಯ

Sindhanuru Murder Case Protest
ಸಿಂಧನೂರು ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸಗೆ ಗುರುವಾರ ಮನವಿ ಸಲ್ಲಿಸಿದ ಪ್ರಗತಿಪರ ಸಂಘಟನೆಗಳ ಒಕ್ಕೂಟ ದೆಹಲಿಯಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವರಿಗೆ ಉಗ್ರ ಶಿಕ್ಷೆ ವಿಧಿಸಲು ಒತ್ತಾಯಿಸಿದರು.
Published on

ಸಿಂಧನೂರು: ದೆಹಲಿಯಲ್ಲಿ ನಡೆದ ದಲಿತ ಬಾಲಕಿ ಮೇಲಿನ ಅತ್ಯಾಚಾರ, ಬರ್ಬರ ಕೊಲೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ತಹಸಿಲ್ ಕಚೇರಿ ಶಿರಸ್ತೇದಾರ ಅಂಬಾದಾಸಗೆ ಮನವಿ ಗುರುವಾರ ಸಲ್ಲಿಸಿತು.

6-7 ವರ್ಷಗಳಿಂದ ದಲಿತ ಸಮುದಾಯದ ಮಹಿಳೆಯರು, ಯುವತಿಯರು, ಮಕ್ಕಳ ಮೇಲೆ ದೌರ್ಜರ್ನ್ಯ ಹೆಚ್ಚುತ್ತಿದೆ. ಹಾಥರಸ್, ಉನ್ನಾವೋ, ಕತುವಾ ಘಟನೆಗಳ ನಂತರ ಈ ಹೇಯ ಕೃತ್ಯ ನಡೆದಿದೆ. ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಈ ಘಟನೆಯ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರಮುಖರಾದ ಅಪ್ಪಣ್ಣ ಕಾಂಬ್ಳೆ, ಆರ್.ಎಚ್.ಕಲಮಂಗಿ, ಎಸ್‌ಐಒನ ವಸೀಮ್, ಸೈಯ್ಯದ್ ತನ್ವೀರ್, ನಿರುಪಾದಿ, ಭಗತ್‌ಸಿಂಗ್ ಆಟೋ ಚಾಲಕರ ಸಂಘದ ಬಸವರಾಜ ಕೊಂಡೆ, ನಿರುಪಾದಿ, ಭೀಮೇಶ ಕವಿತಾಳ, ಮಲ್ಲಿಕಾರ್ಜುನ ಹೂಗಾರ್, ವೆಂಕೋಬ, ಮಲ್ಲಿಕಾರ್ಜುನ ಕುರುಗೋಡು, ನಾಗರಾಜ ತುರ್ವಿಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net