ರಂಗೋಲಿ ಮೂಲಕ ಮಹಿಳೆಯರಲ್ಲಿ ಜಾಗೃತಿ

131022 Sindhanuru Congress Rangoli Jatre
ಸಿಂಧನೂರಿನ ಪಟೇಲವಾಡಿಯಲ್ಲಿ ಮನೆ-ಮನೆಗೆ ರಂಗೋಲಿ ಜಾತ್ರೆ ಕಾರ್ಯಕ್ರಮದಡಿ ಹಾಕಿದ್ದ ರಂಗೋಲಿಗಳನ್ನು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಗುರುವಾರ ವೀಕ್ಷಿಸಿದರು.
Published on

ಸಿಂಧನೂರು: ಭಾರತ್ ಜೋಡೋ ಯಾತ್ರೆ ಅಂಗವಾಗಿ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಬ್ಲಾಕ್ ಹಾಗೂ ಮಹಿಳಾ ಘಟಕದಿಂದ ಗುರುವಾರ ನಗರದ ಪಟೇಲವಾಡಿಯಲ್ಲಿ ಮನೆ-ಮನೆಗೆ ರಂಗೋಲಿ ಜಾತ್ರೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನಾಗವೇಣಿ ಪಾಟೀಲ್ ಮಾತನಾಡಿ, ಭಾರತ್ ಜೋಡೋ ಯಾತ್ರೆಯ ಅಂಗವಾಗಿ ಮನೆ-ಮನೆಗೆ ರಂಗೋಲಿ ಜಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ, ಜನವಿರೋಧಿ ನೀತಿಗಳು ಹಾಗೂ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಮಹಿಳೆಯರಿಗೆ ತಿಳಿಸಲಾಗುತ್ತಿದೆ ಎಂದು ತಿಳಿಸಿದರು.

ಭಾರತ್ ಜೋಡೋ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದು ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ಸೂಚನೆಯಾಗಿದೆ ಎಂದರು. ಮಹಿಳೆಯರು ರಂಗೋಲಿಯಿಂದ ವಿವಿಧ ಚಿತ್ರಗಳನ್ನು ಬಿಡಿಸಿ ಬಣ್ಣ ತುಂಬಿದರು. ಕೆಪಿಸಿಸಿ ಮಹಿಳಾ ಘಟಕ ಕಾರ್ಯದರ್ಶಿ ಪ್ರೇಮಲತಾ, ತಾಲೂಕು ಅಧ್ಯಕ್ಷೆ ದ್ರಾಕ್ಷಾಯಿಣಿ ಬಸನಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ಭಂಗಿ, ಪ್ರಮುಖರಾದ ಜಿ.ಜೆ.ದೇವಿರಮ್ಮ, ನಾಗರತ್ನಮ್ಮ ಬಂಗಾರಶೆಟ್ಟಿ, ನಗರಸಭೆ ಸದಸ್ಯರಾದ ಸರಿತಾ ವೆಂಕಟೇಶ ಬಂಡಿ, ನಳಿನಿ ಚಂದ್ರಶೇಖರ ಮೇಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net