ಮಳೆಗೆ ತೋಯ್ದ ಕಟಾವು ಮಾಡಿದ ಭತ್ತ > ಸಿಂಧನೂರಿನ ಅಲ್ಲಲ್ಲಿ ನೆಲಕಚ್ಚಿದ ಬೆಳೆ

ಸಿಂಧನೂರು ತಾಲೂಕಿನ ಗುಡದಮ್ಮಕ್ಯಾಂಪ್ ಬಳಿ ಅಕಾಲಿಕ ಮಳೆಯಿಂದ ಭತ್ತದ ಬೆಳೆ ನೆಲಕ್ಕೊರಗಿರುವುದು.
ಸಿಂಧನೂರು ತಾಲೂಕಿನ ಗುಡದಮ್ಮಕ್ಯಾಂಪ್ ಬಳಿ ಅಕಾಲಿಕ ಮಳೆಯಿಂದ ಭತ್ತದ ಬೆಳೆ ನೆಲಕ್ಕೊರಗಿರುವುದು.
Published on

ಸಿಂಧನೂರು; ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಅಕಾಲಿಕ ಸಾಧಾರಣ ಮಳೆಗೆ ಕಟಾವು ಮಾಡಲಾದ ಭತ್ತ ತೋಯ್ದಿದ್ದು, ಬೆಳೆಗಾರರಿಗೆ ಆತಂಕ ಎದುರಾಗಿದೆ.

ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಕಳೆದ ವಾರದಿಂದ ಭತ್ತ ಕಟಾವು ಶುರುವಾಗಿದ್ದು, ಆರಂಭದಲ್ಲೇ ಮಳೆ ಆಘಾತ ನೀಡಿದೆ. ಕೊಯ್ಲೋತ್ತರ ಚಟುವಟಿಕೆಗಳನ್ನು ಮುಗಿಸಿ, ಫಸಲನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕೆನ್ನುವ ರೈತರ ಲೆಕ್ಕಾಚಾರ ಉಲ್ಟಾ ಮಾಡುವಂತಿದೆ. ಸ್ಥಳೀಯ ಮತ್ತು ಹೊರಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಹಾರ್ವೆಸ್ಟರ್‌ಗಳು ಭತ್ತ ಕಟಾವು ಮಾಡುತ್ತಿದ್ದು, ಅಲ್ಲಲ್ಲಿ ಭತ್ತವನ್ನು ಒಣಗಿಸುವ ಮತ್ತು ರಾಶಿ ಮಾಡುವ ಕಾರ್ಯ ನಡೆದಿದೆ. ಆದರೆ, ಏಕಾಏಕಿ ಸುರಿದ ಅಕಾಲಿಕ ಮಳೆಗೆ ಒಣಗಿ ಹಾಕಿದ್ದ ಭತ್ತ ತೋಯ್ದು ಹೋಗಿದೆ. ಕಟಾವಿಗೆ ಬಂದ ಭತ್ತವು ಅಲ್ಲಲ್ಲಿ ನೆಲಕ್ಕೆ ಒರಗಿದೆ. ಈ ಹಿಂದೆ ನವೆಂಬರ್‌ನಲ್ಲಿಯೂ ಮುಂಗಾರು ಹಂಗಾಮಿನ 19 ಸಾವಿರ ಹೆ. ಪ್ರದೇಶದ ಭತ್ತದ ಬೆಳೆ ನೆಲಕ್ಕುರುಳಿ ರೈತರನ್ನು ಸಂಕಷ್ಟದ ದವಡೆಗೆ ದೂಡಿತ್ತು.

ಮೋಡ ಕವಿದ ವಾತಾವರಣ: ಬುಧವಾರ ರಾತ್ರಿ ಸುರಿದ ಮಳೆಯಿಂದ ತೋಯ್ದ ಭತ್ತ ಒಣಗಿಸಿಕೊಳ್ಳಲು ಬಿಸಿಲು ಬಿದ್ದಿಲ್ಲ. ಜತೆಗೆ ಭತ್ತ ಕಟಾವು ಮಾಡಿಸಲು ರೈತರು ಮೋಡದ ವಾತಾವರಣ ನೋಡಿ ಹಿಂಜರಿಯುವಂತಾಗಿದೆ. ಮಾರುಕಟ್ಟೆಯಲ್ಲಿಯೂ ಬೆಲೆ ಅಷ್ಟಕ್ಕಷ್ಟೆ ಇದ್ದು, ದರ ಕುಸಿತದ ಭೀತಿ ರೈತರನ್ನು ಕಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net