

ಸಿಂಧನೂರು: ರಾಗಲಪರ್ವಿ ಪಿಡಿಒ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ತಾಪಂ ಇಒ ಲಕ್ಷ್ಮೀದೇವಿಗೆ ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಗ್ರಾಪಂನಲ್ಲಿ ಆ.25 ರಂದು 15 ನೇ ಹಣಕಾಸು ಯೋಜನೆ ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆಗಾಗಿ ಪಿಡಿಒ ಪ್ರಕಾಶ ಸಭೆ ಕರೆದಿದ್ದರು. ನರೇಗಾ ಫಂಡ್ ಟ್ರಾನ್ಸ್‌ಫರ್ ಆರ್ಡರ್ (ಎಫ್‌ಟಿಒ) ಕುರಿತು ಚನ್ನಬಸವ ಪ್ರಶ್ನಿಸಿದಾಗ, ಪಿಡಿಒ ಅವಾಚ್ಯವಾಗಿ ನಿಂದಿಸಿದ್ದಾರೆ. ಸದಸ್ಯರ ವಿರುದ್ಧ ಸುಳ್ಳು ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ. ಅಧ್ಯಕ್ಷರ ವಿರುದ್ಧ ದುರಂಹಕಾರದಿಂದ ಮಾತನಾಡಿದ್ದಾರೆ. ಪಿಡಿಒ ದಾಖಲಿಸಿರುವ ಪ್ರಕರಣದ ಬಗ್ಗೆ ತನಿಖೆ ನಡೆಸಿ ನೈಜಸ್ಥಿತಿ ಏನೆಂಬುದನ್ನು ತಿಳಿಸಬೇಕು. ಪಿಡಿಒ ಪ್ರಕಾಶ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.