ಸಂಘರ್ಷ ಕಾಲದಲ್ಲಿ ಕುರಾನ್ ಪ್ರವಚನ ಪ್ರಸ್ತುತ

ಸಿಂಧನೂರಿನಲ್ಲಿ ಸಾರ್ವಜನಿಕ ಕುರಾನ್ ಪ್ರವಚನದ ಪ್ರಚಾರಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಮಾಜಿ ಸಚಿವ ವೆಂಕಟರಾವ ನಾಡಗೌಡ, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಕುರಾನ್ ಪ್ರವಚನದ ಸ್ವಾಗತ ಸಮಿತಿ ಅಧ್ಯಕ್ಷ ಎಸ್. ಶರಣೇಗೌಡ, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮಹ್ಮದ್ ಹುಸೇನ್ ಇದ್ದರು.

Published on

ಸಿಂಧನೂರು: ಬಹು ವರ್ಷಗಳಿಂದ ನಗರದಲ್ಲಿ ಕುರಾನ್ ಪ್ರವಚನ ನೀಡುತ್ತಿರುವ ಮುಹಮ್ಮದ್ ಕುಂಞ ಅವರು ಈ ಬಾರಿಯೂ ಮೂರು ದಿನ ಕುರಾನ್ ಪ್ರವಚನ ನೀಡಲಿದ್ದು, ಪ್ರಸ್ತುತ ಅಗತ್ಯವಿದೆ ಎಂದು ಮಾಜಿ ಸಚಿವ ವೆಂಕಟರಾವ ನಾಡಗೌಡ ಹೇಳಿದರು.

ನಗರದ ಮಸ್ಜಿದ್-ಏ-ಹುದಾ ಪಾಟೀಲ್‌ವಾಡಿ ಮುಖ್ಯರಸ್ತೆಯಲ್ಲಿ ಕುರಾನ್ ಪ್ರವಚನದ ಪ್ರಚಾರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿ, ದೇಶದಲ್ಲಿ ಧರ್ಮ, ಜಾತಿಗಳ ನಡುವೆ ಸಂಘರ್ಷಗಳು ನಡೆಯುತ್ತಿರುವ ಇಂಥ ಸಂದರ್ಭದಲ್ಲಿ ಕುರಾನ್ ಪ್ರವಚನ ಪ್ರಸ್ತುತ ಎಂದರು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿ, ಮೇ 2ರಿಂದ 4ರವರೆಗೆ ಕುರಾನ್ ಪ್ರವಚನ ಕಾರ್ಯಕ್ರಮ ನಡೆಯಲಿದ್ದು, ಎಲ್ಲರೂ ಭಾಗವಹಿಸುವ ಅವಶ್ಯಕತೆ ಇದೆ ಎಂದರು.

ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟವರಿಗೆ ಶಾಂತಿ ಕೋರಿ ಮೌನಚರಣೆ ಮಾಡಲಾಯಿತು. ಕುರಾನ್ ಪ್ರವಚನದ ಸ್ವಾಗತ ಸಮಿತಿ ಅಧ್ಯಕ ಎಸ್. ಶರಣೇಗೌಡ, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮಹ್ಮದ್ ಹುಸೇನ್, ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್, ಪ್ರಮುಖರಾದ ಹಂಪಯ್ಯಸ್ವಾಮಿ ಸಾಲಿಮಠ, ವಿಶ್ವನಾಥ ಮಾಲಿಪಾಟೀಲ್, ನಗರಸಭೆ ಮಾಜಿ ಸದಸ್ಯ ನಬೀಸಾಬ್, ನಗರಸಭೆ ಸದಸ್ಯ ಜಿಲಾನಿಪಾಷಾ, ಗೋವಿಂದರಾವ, , ಹನುಮೇಶ ಕುರುಕುಂದಿ, ಶಿವು ಮೇಟಿ, ಕರೀಂಸಾಬ್, ಪಾಷಾ ಎಸ್‌ಪಿ ಟೈಲರ್, ಕೆ.ಶರಣಪ್ಪ ತೆಂಗಿನಕಾಯಿ, ಸೈಯದ್ ಜಾಫರ್ ಜಹಗೀರದಾರ್, ಮಹಮ್ಮದ್ ಅಲಿ ಮುರ್ತುಜಾ, ಬಾಬರ್ ಬೇಗ್, ಹುಸೇನಬಾಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net