

ಪಿಎಸ್‌ಐ ಸೌಮ್ಯ ಹಿರೇಮಠ ಹೇಳಿಕೆ
ಸಿಂಧನೂರು: ಕನ್ನಡದ ಪ್ರಮುಖ ವಚನಗಾರ್ತಿ ಅಕ್ಕಮಹಾದೇವಿಯವರ ವಚನಗಳಲ್ಲಿ ಸಾಮಾಜಿಕ ಚಿಂತನೆ, ಬದುಕಿನ ಮಾರ್ಗಗಳು ಅಡಕವಾಗಿದ್ದು ಇವು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಪಿಎಸ್‌ಐ ಸೌಮ್ಯಾ ಹಿರೇಮಠ ಹೇಳಿದರು.
ನಗರದ ಬಸವ ಪ್ರಸಾದ ನಿಲಯದಲ್ಲಿ ಕಸಾಪ ತಾಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ಶಿವಶರಣೆ ಅಕ್ಕಮಹಾದೇವಿಯವರ ಕುರಿತ ಕವನ ವಾಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಣ್ಣಿಗೂ ವ್ಯಕ್ತಿತ್ವವಿದೆ ಎಂಬುದನ್ನು ಅಕ್ಕಮಹಾದೇವಿ ಅಂದಿನ ಕಾಲದಲ್ಲಿಯೇ ಬಹು ದಿಟ್ಟತನದಿಂದ ತೋರಿಸುವ ಮೂಲಕ ಸ್ತ್ರೀಯರಿಗೆ ಆದರ್ಶಪ್ರಾಯರಾಗಿದ್ದಾರೆ. ಅಕ್ಕಮಹಾದೇವಿ ಕವಯಿತ್ರಿ, ಸ್ತ್ರೀವಾದಿ ಮಾತ್ರವಲ್ಲ. ಆಧ್ಯಾತ್ಮಿಕ ಹುಡುಕಾಟದಲ್ಲಿಯೂ ಗಮನ ಸೆಳೆಯುತ್ತಾರೆ ಎಂದರು.