ವೃತ್ತಿ ರಂಗಭೂಮಿಗೆ ಮೃಢದೇವರ ಕೊಡುಗೆ ಅಪಾರ

8SND-08
Published on

ಸಿಂಧನೂರು: ಇಡೀ ಜೀವನವನ್ನು ರಂಗಭೂಮಿಗಾಗಿ ಮುಡಿಪಾಗಿಟ್ಟಿದ್ದ, ಮೃಡದೇವ ಗವಾಯಿ ಅಪರೂಪದ ನಟರಾಗಿದ್ದರು. ವೃತ್ತಿ ರಂಗಭೂಮಿಗೆ ಮೃಢದೇವರು ಅಪಾರ ಕೊಡುಗೆ ನೀಡಿದ್ದಾರೆಂದು ಗಿರಿಜಾ ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ವೀರನಗೌಡ ಗುಮಗೇರಿ ಹೇಳಿದರು.

ಜಾಲಿಹಾಳ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡಿದ್ದ ನಮ್ಮ ನಡೆ ಹಳ್ಳಿಕಡೆ ಹಾಗೂ ಮರಿಸ್ವಾಮಿ ಹೊಸಳ್ಳಿ, ಬಿ.ಬಸವರಾಜ ಕೋಟೆ ಮತ್ತು ಚಂದ್ರಪ್ಪಗೌಡ ನೆಟೆಕಲ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ ಮಾತನಾಡಿ, ನಾಟಕಗಳು ಸಮಾಜದ ಪ್ರತಿಬಿಂಬ ಇದ್ದಂತೆ. ನಶಿಸಿ ಹೋಗುತ್ತಿರುವ ರಂಗಕಲೆಯನ್ನು ಉಳಿಸಿ, ಬೆಳೆಸಲು ಎಲ್ಲರೂ ಮುಂದಾಗಬೇಕು. ಸಿಂಧನೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಂಗಮಂದಿರಕ್ಕೆ ಮೃಡದೇವ ಗವಾಯಿ ಹೆಸರು ಇಡುವುದು ಅವಶ್ಯ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net