ಸಂಗೀತದಿಂದ ಮನಸ್ಸಿಗೆ ನೆಮ್ಮದಿ

20SND-01
Published on

ಸಿಂಧನೂರು: ಸಂಗೀತ ಮನಸ್ಸಿಗೆ ನೆಮ್ಮದಿ ನೀಡುವ ಜತೆಗೆ ಜೀವನಕ್ಕೆ ಉತ್ಸಾಹ ತಂದುಕೊಂಡುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಶಾಶ್ವತಸ್ವಾಮಿ ಮುಕ್ಕುಂದಿಮಠ ಹೇಳಿದರು.

ನಗರದ ಶ್ರೀರಾಮಮಂದಿರದಲ್ಲಿ ಭಾನುವಾರ ಶಿವರಾತ್ರಿ ಅಂಗವಾಗಿ ಸಂಸ್ಕಾರ ಭಾರತಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಗೀತದಲ್ಲಿ ಅಡಗಿರುವ ಶಕ್ತಿ ಯಾವುದರಲ್ಲಿಯೂ ಇಲ್ಲ. ಇದರಲ್ಲಿ ಭಗವಂತನನ್ನು ಕಾಣುವ ಶಕ್ತಿ ಇದೆ ಎಂದರು.

ಸಂಸ್ಕಾರ ಭಾರತಿ ಕಾರ್ಯದರ್ಶಿ ವಾಸುದೇವ ಉಪ್ಪಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಮರಾವ ಕುಲಕರ್ಣಿ, ಹುಸೇಪ್ಪ ಪಿ., ರಾಕೃಷ್ಣಾಚಾರ ಗೋನವಾರ ಮಾತನಾಡಿದರು. ಗೌರವಾಧ್ಯಕ್ಷ ವೆಂಕಣ್ಣಾಚಾರ ಜೋಷಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯರಾದ ಸರಿತಾ ರಾಜು ಬಂಡಿವಕೀಲ್, ನಳಿನಿ ಚಂದ್ರಶೇಖರ ಮೇಟಿ, ಬಾಹ್ಮಣ ಸಮುದಾಯ ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ, ಪ್ರಹ್ಲಾದ ಕುಲಕರ್ಣಿ, ಗುಂಡುರಾವ ಚನ್ನಳ್ಳಿ ಇದ್ದರು.

ಹರಿಪ್ರಿಯಾ ಉಪ್ಪಳ ಪ್ರಾರ್ಥಿಸಿದರು. ವಿಠಲ ಕಲ್ಲೂರು ನಿರೂಪಿಸಿದರು. ಜಾಗರೋತ್ಸವ ಸಂಗೀತ ಕಾರ್ಯಕ್ರಮ ಸ್ಥಳೀಯ ಬಾಲ ಕಲಾವಿದ ವಿರಾಟ್ ಆರ್.ಬದಿ ಅವರ ಬಾನ್ಸುರಿ ವಾದನದೊಂದಿಗೆ ಆರಂಭವಾಯಿತು. ವಿಜಯಕುಮಾರ ಪಿ.ಬದಿ ತಬಲಾ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net