

ಸಿಂಧನೂರು: ಬೂತ್‌ಮಟ್ಟದಿಂದ ಬಿಜೆಪಿ ಕಾರ್ಯಕರ್ತರು ಬಲಪಡಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಹೇಳಿದರು.
ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಗರ ಮತ್ತು ಗ್ರಾಮೀಣ ಮಂಡಲದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಮಂಡಲ ಕಾರ್ಯಾಗಾರದಲ್ಲಿ ಮಾತನಾಡಿದರು.
ನರೇಂದ್ರ ಮೋದಿ ಅವರು ಪ್ರಧಾನಿ ಮಂತ್ರಿಯಾದ ನಂತರ ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದ್ದು, ವಿದೇಶಗಳು ಸಹ ಭಾರತದತ್ತ ತಿರುಗಿ ನೋಡುತ್ತಿವೆ. ಭ್ರಷ್ಟಾಚಾರ, ಲಂಚಮುಕ್ತ ಆಡಳಿತ ಮೋದಿ ನೀಡುತ್ತಿದ್ದಾರೆ. ರೈತರು, ಬಡವರು ಹಾಗೂ ಮಹಿಳೆಯರ ಪರ ಯೋಜನೆಗಳನ್ನು ಜಾರಿಗೆ ತಂದು ಸರ್ವರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಇವುಗಳ ಕುರಿತು ನಗರ ಸೇರಿ ಎಲ್ಲ ಹಳ್ಳಿಗಳ ಜನರಿಗೆ ತಿಳಿಸಿ, ಪಕ್ಷ ಸಂಘಟನೆ ಮಾಡಬೇಕು ಎಂದರು.
ಸಂಘಟನಾ ಪರ್ವ ಸಂಚಾಲಕ ಶರಣಪ್ಪ ಗೌಡ ನಕ್ಕುಂದಿ, ಸಹ ಸಂಚಾಲಕ ನಾಗರಾಜ ಗೌಡ ಸಿರವಾರ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ, ನಗರ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು, ಪ್ರಮುಖರಾದ ಸಿರಾಜ್‌ಪಾಷಾ, ಮಮತಾ ಹಿರೇಮಠ ಇದ್ದರು.