

ಸಿಂಧನೂರು: ನಗರದ ಮಾತೃ ಆಸರೆ ಬುದ್ಧಿಮಾಂದ್ಯ ಶಾಲೆಯಲ್ಲಿ ತಾಲೂಕು ಫೋಟೋಗ್ರಾಫರ್ಸ್-ವಿಡಿಯೋ ಗ್ರಾಫರ್ಸ್ ಅಸೋಸಿಯೇಷನ್‌ನಿಂದ ಶುಕ್ರವಾರ ಛಾಯಾಗ್ರಹಣ ದಿನ ಆಚರಿಸಲಾಯಿತು.
ಹಿರಿಯ ಛಾಯಾಗ್ರಾಹಕರಾದ ಬಾಬು ಸಾ ಕಾಟ್ವಾ ಹಾಗೂ ವೀರಾರೆಡ್ಡಿ ಜವಳಗೇರಾ ಮಾತನಾಡಿ, ಛಾಯಾಗ್ರಾಹಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಛಾಯಾಗ್ರಹಣಕ್ಕೆ ಬೇಕಾಗುವ ಸಲಕರಣೆ ಖರೀದಿಗೆ ಆರ್ಥಿಕ ಸಹಾಯ ನೀಡಬೇಕಿದೆ ಎಂದು ಹೇಳಿದರು. ಶಾಲೆಯ ವ್ಯವಸ್ಥಾಪಕ ಹಾಲಯ್ಯ ಹಿರೇಮಠ ಮಾತನಾಡಿ, ಇನ್ನೊಬ್ಬರ ನಗುವಿನಲ್ಲಿ ನಿಮ್ಮ ಕಷ್ಟವಿದೆ. ನಿಮ್ಮ ಎಲ್ಲ ನೋವನ್ನು ಮರೆತು ನಮ್ಮನ್ನ ಸ್ಮೈಲ್ ಪ್ಲೀಸ್ ಎಂದು ಹೇಳುತ್ತೀರಿ. ಸರ್ಕಾರ ನಿಮ್ಮನ್ನು ಕಡೆಗಣೆಸಿದ್ದು ದುರ್ದೈವ ಎಂದರು.
ಮಕ್ಕಳಿಗೆ ರಾಖಿ ಕಟ್ಟಿ ಮಕ್ಕಳ ಊಟಕ್ಕೆ ಬೇಕಾಗುವ ದಿನಸಿ ಪದಾರ್ಥಗಳನ್ನ ನೀಡಲಾಯಿತು. ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಮಕ್ಕಳು ಕೃಷ್ಣ, ರಾಧೆಯ ವೇಷ ಧರಿಸಿ ಗಮನ ಸೆಳೆದರು. ಸಂಘದ ರಾಜ್ಯ ನಿರ್ದೇಶಕ ವೆಂಕಟೇಶ ಕೆಂಗಲ್, ತಾಲೂಕು ಅಧ್ಯಕ್ಷ ವಿಶ್ವನಾಥ ಚೌದ್ರಿ, ಛಾಯಾಗ್ರಾಹಕರಾದ ಮಹಾಂತೇಶ ಯಲಬುರ್ತಿ, ನಾರಾಯಣ ಖೋಡೆ, ಮಂಜುನಾಥ ಖೋಡೆ, ವೀರೇಶ ಗೋಮರ್ಸಿ, ಇಮ್ರಾನ್, ರಮೇಶ ಸಾಸಲಮರಿ, ಪ್ರಹ್ಲಾದ ಕೆಂಗಲ್, ಮಂಜುನಾಥ ಹಿರೇಗೌಡರ್, ರಾಜು ಗಾಂಧಿನಗರ, ಗಣೇಶ ಖೋಡೆ, ಜಗದೀಶ, ರಮೇಶ ಸಾಸಲಮರಿ, ರವಿ ರಾಯಲ್, ಇಮ್ರಾನ್, ಮಹ್ಮದ್ ಚಳ್ಳಗಿ, ಮಂಜುನಾಥ, ವಿಜಯ ಕುಲಕರ್ಣಿ, ಪರಶುರಾಮ ಪಾಟೀಲ್, ನರಸಿಂಹ ಛಾವಡಿಮನಿ ಇದ್ದರು.