ಮಕ್ಕಳ ನಡೆಯ ಬಗ್ಗೆ ಪಾಲಕರು ಗಮನಹರಿಸಲಿ

Published on

ಸಿಂಧನೂರು, ಮಕ್ಕಳ, ನಡೆಯ, ಬಗ್ಗೆ, ಪಾಲಕರು, ಗಮನಹರಿಸಲಿ,

ಸಿಂಧನೂರು: ಮಕ್ಕಳಲ್ಲಿ ಪಾಠದ ಜತೆಗೆ ನೈತಿಕ ಮೌಲ್ಯಗಳನ್ನು ಬಿತ್ತುವ ಕೆಲಸವಾಗಬೇಕು. ಅಂದಾಗ ಅವರ ಮುಂದಿನ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವಾಗಲಿದೆ ಎಂದು ನಿವೃತ್ತ ಶಿಕ್ಷಕ ವೆಂಕನಗೌಡ ವಟಗಲ್ ಹೇಳಿದರು.

ತಾಲೂಕಿನ ಕುರುಕುಂದ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಸಿದ್ದ ವೆಂಕಣ್ಣ ಸಾಹುಕಾರ ಹಾಗೂ ಗವಿಸಿದ್ದಪ್ಪ ಪಗಡದಿನ್ನಿ ಸ್ಮರಣಾರ್ಥ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.

ಮೊಬೈಲ್, ಟಿವಿ ಕಾರ್ಯಕ್ರಮಗಳಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಅದಕ್ಕಾಗಿ ಪಾಲಕರು ಎಚ್ಚರವಹಿಸಬೇಕಾದ ಅಗತ್ಯವಿದೆ ಎಂದರು.

ಜಾಗತಿಕ ಲಿಂಗಾಯತ ಧರ್ಮದ ಜಿಲ್ಲಾ ಘಟಕ ಅಧ್ಯಕ್ಷ ಪಿ.ರುದ್ರಪ್ಪ ಪಗಡದಿನ್ನಿ ಮಾತನಾಡಿ, ಮಕ್ಕಳಲ್ಲಿ ಸರಿಯಾದ ಮೌಲ್ಯ ಬಿತ್ತುವ ಕೆಲಸ ಶಿಕ್ಷಕರಿಂದಾಗಬೇಕು. ಇತ್ತೀಚೆಗೆ ಶಿಕ್ಷಣದಲ್ಲಿ ಮೌಲ್ಯಗಳ ಕೊರತೆ ಹೆಚ್ಚಾಗುತ್ತಿದೆ. ಹಿಂಸೆ, ಭ್ರಷ್ಟಾಚಾರದಂಥ ಅಂಶಗಳು ಮೌಲ್ಯಕ್ಕೆ ಪೆಟ್ಟು ನೀಡುತ್ತಿವೆ. ಮಕ್ಕಳಲ್ಲಿ ಪ್ರಾಮಾಣಿಕತೆ ಗಟ್ಟಿಯಾಗಬೇಕು. ಅಂದಾಗ ಸಮರ್ಥ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಪರಿಷತ್ ನಡೆ ಹಳ್ಳಿ ಕಡೆ ಎನ್ನುವ ಘೋಷ ವಾಕ್ಯದೊಂದಿಗೆ ಕಸಾಪ ದತ್ತಿ ಉಪನ್ಯಾಸಗಳನ್ನು ನೀಡುತ್ತದೆ. ದಿವಂಗತರ ಹೆಸರಿನಲ್ಲಿ ನೀಡಿರುವ ದತ್ತಿಗಳಡಿ ಉತ್ತಮ ವಿಷಯಗಳ ಕುರಿತು ಉಪನ್ಯಾಸ ನೀಡಿ, ಕಾರ್ಯಕ್ರಮಕ್ಕೆ ಅರ್ಥ ಬರುವಂತೆ ಮಾಡಲಾಗಿದೆ ಎಂದರು.

ದತ್ತಿ ದಾನಿ ಪಿ.ವೀರಭದ್ರಪ್ಪ ಕುರುಕುಂದಿ ಮಾತನಾಡಿದರು. ದತ್ತಿ ದಾನಿ ವಿರೂಪಣ್ಣ ಸಾಹುಕಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಶಿಕ್ಷಕ ಶಂಕ್ರಪ್ಪ ಬೊಮ್ಮನಾಳ, ಪ್ರಮುಖರಾದ ತಿಮ್ಮಣ್ಣ ಸಾಹುಕಾರ, ನಾಗಭೂಷಣ ನವಲಿ, ಅಮರೇಗೌಡ ಚನ್ನಳ್ಳಿ, ಯಂಕನಗೌಡ ಪೊಪಾ., ವಿರೂಪಣ್ಣ ಕಾಸರಡ್ಡಿ, ಮಲ್ಲಪ್ಪ ಬಸಾಪುರ, ಅಮರೇಶ ಪಗಡದಿನ್ನಿ, ಎಸ್ಡಿಎಂಸಿ ಅಧ್ಯಕ್ಷ ಗುಡದಪ್ಪ, ಕಸಾಪ ಸದಸ್ಯರಾದ ಬಷೀರ್ ಅಹ್ಮದ್, ಸಂಗೀತ ಸಾರಂಗಮಠ ಇದ್ದರು.

ಫೋಟೊ7ಎಸ್‌ಎನ್‌ಡಿ-04

ಕುರುಕುಂದ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಸಿದ್ದ ಕಾರ್ಯಕ್ರಮವನ್ನು ಜಾಗತಿಕ ಲಿಂಗಾಯತ ಧರ್ಮ ಜಿಲ್ಲಾ ಘಟಕ ಅಧ್ಯಕ್ಷ ಪಿ.ರುದ್ರಪ್ಪ ಉದ್ಘಾಟಿಸಿದರು. ದತ್ತಿ ದಾನಿ ವಿರೂಪಣ್ಣ ಸಾಹುಕಾರ, ಮುಖ್ಯಶಿಕ್ಷಕ ಶಂಕ್ರಪ್ಪ ಬೊಮ್ಮನಾಳ, ಪ್ರಮುಖರಾದ ತಿಮ್ಮಣ್ಣ ಸಾಹುಕಾರ, ನಾಗಭೂಷಣ ನವಲಿ, ಎಸ್ಡಿಎಂಸಿ ಅಧ್ಯಕ್ಷ ಗುಡದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net