ಖಾಕಿ ಮೇಲೆ ಪುಂಡಾಟಿಕೆ ಸಲ್ಲ- ಕೆಪೆಕ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ

K Virupakshappa
Published on

ಸಿಂಧನೂರು: ಪುನೀತ್ ರಾಜಕುಮಾರ್ ಪುತ್ಥಳಿ ಸ್ಥಾಪನೆ ವಿಚಾರವಾಗಿ ಕಾನೂನು ಕೈಗೆತ್ತಿಕೊಂಡು ಮೆರವಣಿಗೆ ನಡೆಸಿರುವುದು ಅಕ್ಷಮ್ಯವಾಗಿದೆ ಎಂದು ಕೆಪೆಕ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ತಿಳಿಸಿದರು.

ನಗರದ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೆರವಣಿಗೆಯಲ್ಲಿ ಎಲ್ಲ ಜಾತಿಯವರಿದ್ದರು. ಆದರೆ, ಅಧಿಕಾರಿಗೆ ನೀನು ಜಾತಿ ರಾಜಕೀಯ ಮಾಡುತ್ತಿದ್ದೀಯ ಎಂದು ಹೇಳುವುದು ಸರಿಯಲ್ಲ. ಮೆರವಣಿಗೆಗೆ ಪೊಲೀಸರು ಅಡ್ಡಿಪಡಿಸಿದರೆಂದು ಅವರ ಮೇಲೆ ಹಲ್ಲೆ ಮಾಡಿ, ಸಾರ್ವಜನಿಕರ ಶಾಂತಿಗೆ ಭಂಗ ಉಂಟು ಮಾಡಿರುವುದು, ದೌರ್ಜನ್ಯ, ಪುಂಡಾಟಿಕೆ ಮೆರೆದಿರುವುದು ಖಂಡನಾರ್ಹ ಎಂದರು.

ಪುನೀತ್‌ರಾಜಕುಮಾರ್ ಪುತ್ಥಳಿ ಸ್ಥಾಪನೆಗೆ ಯಾರ ವಿರೋಧವೂ ಇಲ್ಲ. ಈ ಬಗ್ಗೆ ಚರ್ಚಿಸಿ ನಂತರ ಪ್ರತಿಷ್ಠಾಪಿಸುವ ಬಗ್ಗೆ ಶಾಸಕ ವೆಂಕಟರಾವ ನಾಡಗೌಡಗೆ ತಹಸೀಲ್ದಾರ್‌ಹಾಗೂ ನಗರಸಭೆ ಪೌರಾಯುಕ್ತ ತಿಳಿಸಿದ್ದರೂ, ಶಾಸಕರ ಪುತ್ರ ಅನುಮತಿ ಇಲ್ಲದೆ ಮೆರವಣಿಗೆ ಮಾಡಿದ್ದಾರೆ. ರಾಜಕೀಯಕ್ಕಾಗಿ ಪುನೀತ್ ರಾಜಕುಮಾರ್ ಹೆಸರು ಬಳಕೆ ಮಾಡಿಕೊಳ್ಳಲಾಗಿದೆ. ಪಿಎಸ್‌ಐ ಉದ್ಧಟತನ ತೋರಿಸಿರಬಹುದು. ಆದರೆ, ಘಟನೆಗೆ ಜಾತಿಯ ಬಣ್ಣ ಬಳಿಯುವುದು ಸರಿಯಲ್ಲ. ಹಲ್ಲೆ ಮಾಡಿದವರನ್ನು ಗಡಿಪಾರು ಮಾಡಬೇಕೆಂದು ಕೆ.ವಿರೂಪಾಕ್ಷಪ್ಪ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net