200 ದಿನ ನರೇಗಾ ಕೆಲಸ ನೀಡಲಿ

Sindhanour Narega workers protest
ಸಿಂಧನೂರು ತಾಪಂ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಣ್ಣ ನಾಯಕ, ತಾಲೂಕು ಅಧ್ಯಕ್ಷ ಎಚ್.ವಿರೂಪಾಕ್ಷಿಗೌಡ, ದೇವಮ್ಮ ಪೂನಾ, ಪ್ರಮೀಳಮ್ಮ ಬೂತಲದಿನ್ನಿ ಇತರರಿದ್ದರು.
Published on

ಸಿಂಧನೂರು: ನರೇಗಾ ಯೋಜನೆ ಕೂಲಿಕಾರರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ನಗರದ ತಾಪಂ ಮುಂದೆ ಸೋಮವಾರ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಸಿ, ತಾಪಂ ಎಡಿ ಅಮರಗುಂಡಪ್ಪಗೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾ ಉಪಾಧ್ಯಕ್ಷ ಬಸವಂತರಾಯ ಗೌಡ ಕಲ್ಲೂರು ಮಾತನಾಡಿ, ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಯೋಜನೆಯಡಿ ರೂಪಿಸಿರುವ ನೀತಿಗಳು ನೈಜ ಕೆಲಸ ಮಾಡಿ, ಬದುಕು ಕಟ್ಟಿಕೊಳ್ಳುವವರಿಗೆ ಮಾರಕವಾಗಿ ಪರಿಣಮಿಸಿವೆ. ಕೂಡಲೇ ನರೇಗಾ ಕೆಲಸದಲ್ಲಿ ಫೋಟೊ ತೆಗೆಯುವುದನ್ನು ಕೈಬಿಡಬೇಕು. ಕಾಯಕ ಬಂಧುಗಳಿಗೆ ಕಾರ್ಡ್ ವಿತರಿಸಿ, ಪ್ರೋತ್ಸಾಹಧನ ತಕ್ಷಣ ಜಾರಿ ಮಾಡಬೇಕು. ಜಾಬ್‌ಕಾರ್ಡ್‌ನಲ್ಲಿ ಇಬ್ಬರು ಸದಸ್ಯರಿದ್ದರೆ 200 ದಿನಗಳ ಕೆಲಸ ಕೊಡಬೇಕು. ಪೂರ್ಣ ಕೂಲಿ ಪಾವತಿಸಬೇಕು. ಕೂಲಿ ಮೊತ್ತ 600 ರೂ.ಗೆ ಹೆಚ್ಚಿಸಿ, ವಲಸೆ ಹೋಗುವುದನ್ನು ತಪ್ಪಿಸಬೇಕು. ಎನ್‌ಎಂಎನ್‌ಎಸ್ ತೆಗೆಯುವಲ್ಲಿ ತಪ್ಪುಗಳನ್ನು ತಡೆಯಬೇಕೆಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಣ್ಣ ನಾಯಕ, ತಾಲೂಕು ಅಧ್ಯಕ್ಷ ಎಚ್.ವಿರೂಪಾಕ್ಷಿಗೌಡ, ಪ್ರಮುಖರಾದ ಯಂಕಪ್ಪ ಕೆಂಗಲ್, ಗೇಸುದರಾಜ ಸಾಲಗುಂದ, ಗರೀಬ್‌ಸಾಬ್, ಹಳ್ಳಪ್ಪ, ಬಸವಂತರಾಯಗೌಡ ಕಲ್ಲೂರು, ದೇವಮ್ಮ ಪೂನಾ, ಪ್ರಮೀಳಮ್ಮ ಬೂತಲದಿನ್ನಿ, ಬಸಮ್ಮ ಮುಳ್ಳೂರು, ರೇಣುಕಾ ಜೂಲದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net