ವೈದ್ಯಾಧಿಕಾರಿಗಳ ವರ್ಗಾವಣೆ ತಡೆಯಲಿ

snd-1
ನಿರುಪಾದಿ ಸಾಸಲಮರಿ
Published on

ಸಿಂಧನೂರು: ತಾಲೂಕು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ನಾಗರಾಜ ಕಾಟ್ವಾ ಹಾಗೂ ಡಾ.ಕೋನಿಕಾ ಕಾಟ್ವಾ ಅವರ ವರ್ಗಾವಣೆ ಆದೇಶ ತಡೆಹಿಡಿಯಬೇಕು ಎಂದು ಜೈ ಭೀಮ್ ಘರ್ಜನೆ ತಾಲೂಕು ಸಮಿತಿ ಅಧ್ಯಕ್ಷ ನಿರುಪಾದಿ ಸಾಸಲಮರಿ ಕೋರಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2014ರಿಂದ ಇಲ್ಲಿವರೆಗೆ ಸೇವೆ ಸಲ್ಲಿಸಿರುವ ಡಾ.ನಾಗರಾಜ ಕಾಟ್ವಾ ಅವರು, 24,456 ಹೆರಿಗೆ, 11,193 ಶಸ್ತ್ರಚಿಕಿತ್ಸೆ ಹಾಗೂ 463 ಗರ್ಭಕಂಠ ತೆಗೆವ ಶಸ್ತ್ರಚಿಕಿತ್ಸೆ ಸೇರಿ ಹಲವು ಗಂಭೀರ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ.

ಮೊಣಕಾಲು ಮರುಜೋಡಣೆ ಚಿಕಿತ್ಸೆ ಮಾಡುವುದರಲ್ಲಿ ಯಶಸ್ವಿಯಾಗಿದ್ದು, ಬಡವರಿಗೆ ಅವರ ಸೇವೆ ಅಗತ್ಯವಿದೆ. ಜತೆಗೆ ಅವರ ಪತ್ನಿ ಸಹ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಉತ್ತಮ ಸೇವೆ ನೀಡುತ್ತಿದ್ದರು.

ವೈದ್ಯ ದಂಪತಿಯನ್ನು ಏಕಾಏಕಿ ಬೇರೆಡೆ ವರ್ಗಾಯಿಸಿದರೆ ಸಮಸ್ಯೆಯಾಗಲಿದ್ದು, ಆರೋಗ್ಯ ಇಲಾಖೆ ಹಾಗೂ ಶಾಸಕರು ಕಾಳಜಿವಹಿಸಿ ವರ್ಗಾವಣೆ ತಡೆಯಬೇಕೆಂದು ಒತ್ತಾಯಿಸಿದರು.

ಸಂಘದ ತಾಲೂಕು ಕಾರ್ಯಾಧ್ಯಕ್ಷ ವೀರೇಶ ಬೂದಿವಾಳಕ್ಯಾಂಪ್, ಉಪಾಧ್ಯಕ್ಷ ಬಾಲರಾಜು ವಿರುಪಾಪುರ, ವೆಂಕಟೇಶ ಹೊಸಳ್ಳಿ, ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಸೋಮಲಾಪುರ, ಚನ್ನಬಸವ ಯದ್ದಲದೊಡ್ಡಿ, ಮುನಿಯಪ್ಪ ತಿಮ್ಮಾಪುರ, ಮುದುಕಪ್ಪ ಸಾಸಲಮರಿ, ರಾಮಣ್ಣ ಹಡಗಲ್, ಬಸವರಾಜ ಬೂದಿವಾಳಕ್ಯಾಂಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net