ಸಿಂಧನೂರು: ನಗರದ ಟೌನ್‌ಹಾಲ್‌ನಲ್ಲಿ ಆ.24 ರಿಂದ 26 ರವರೆಗೆ ಸಮುದಾಯ ಕರ್ನಾಟಕ ಸ್ಥಳೀಯ ಘಟಕದಿಂದ ನಾಟಕೋತ್ಸವ ಆಯೋಜಿಸಲು ತೀರ್ಮಾನಿಸಲಾಗಿದೆ.
ನಾಟಕೋತ್ಸವ ಪೂರ್ವದಲ್ಲಿ ಮಕ್ಕಳಿಗಾಗಿ ಸ್ವಾತಂತ್ರ್ಯ ಹೋರಾಟದ ಕುರಿತು ಎರಡು ನಿಮಿಷದ ವಿಡಿಯೋ ಸ್ಪರ್ಧೆ, ಯುವಜನರಿಗಾಗಿ ಭಾಷಣ, ಮಹಿಳೆಯರಿಗಾಗಿ ನೃತ್ಯ ಹಾಗೂ ಹಾಡುಗಳ ಸ್ಪರ್ಧೆ ನಡೆಸಲಾಗುತ್ತದೆ. ನಾಟಕೋತ್ಸವದ ಸ್ಮರಣ ಸಂಚಿಕೆ ಹೊರತರಲು ನಿರ್ಧರಿಸಲಾಗಿದೆ.
ಕಾರ್ಯಕ್ರಮಗಳ ಸಿದ್ಧತೆಗಾಗಿ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಸರಸ್ವತಿ ಪಾಟೀಲ್, ಕಾರ್ಯದರ್ಶಿಯಾಗಿ ಎಸ್.ದೇವೇಂದ್ರಗೌಡ, ಖಜಾಂಚಿಯಾಗಿ ಸಂಗಮೇಶ ಕೋಟೆಯನ್ನು ನೇಮಕ ಮಾಡಲಾಗಿದೆ. ವಿವಿಧ ಸ್ಪರ್ಧೆಗಳ ಆಯೋಜನೆ ಮತ್ತು ಕಾರ್ಯಕ್ರಮ ರೂಪಿಸಲು ತಾಂತ್ರಿಕ ಸಮಿತಿ ರಚಿಸಿದ್ದು, ಗಿರೀಶ ಈಚನಾಳ, ಮಹೇಶ, ಮಲ್ಲಿಕಾರ್ಜುನ ಕೋಟೆ, ವೆಂಕನಗೌಡ ವಟಗಲ್, ಶ್ರೀಶೈಲ ಕೌದಿ, ಕಂಠೆಪ್ಪ, ಬಸವಂತರಾಯಗೌಡ ಕಲ್ಲೂರಗೆ ಜವಾಬ್ದಾರಿ ನೀಡಲಾಯಿತು. ನಾಟಕೋತ್ಸವದ ಲೋಗೋ ರಚಿಸಲು ಗಂಗಾಧರ ಪತ್ತಾರ ಹಾಗೂ ಶಿವಾನಂದ ಸಾತಿಹಾಳಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಸಮುದಾಯ ತಾಲೂಕು ಅಧ್ಯಕ್ಷ ಶರಬಣ್ಣ ನಾಗಲಾಪುರ ತಿಳಿಸಿದ್ದಾರೆ.