ದುಡಿಮೆಯ ಭರದಲ್ಲಿ ಆರೋಗ್ಯ ನಿರ್ಲಕ್ಷಿಸದಿರಿ

Sindhanour Narega Free helth camp
ಸಿಂಧನೂರು ತಾಲೂಕಿನ ಮಳ್ಳೂರು ಗ್ರಾಮದ ನಾಲಾ ಹೂಳೆತ್ತುವ ಸ್ಥಳದಲ್ಲಿ ಶುಕ್ರವಾರ ಗ್ರಾಮ ಆರೋಗ್ಯ ಅಭಿಯಾನದಡಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಕೆಎಚ್‌ಪಿಟಿ ತಾಲೂಕು ಸಂಯೋಜಕ ಸಂಜೀವಮೂರ್ತಿ, ಆರೋಗ್ಯ ಸಿಬ್ಬಂದಿ ಇದ್ದರು.
Published on


ಸಿಂಧನೂರು: ನರೇಗಾ ಕಾರ್ಮಿಕರು ಆರೋಗ್ಯದ ಕಾಳಜಿ ವಹಿಸಬೇಕೆಂದು ಕೆಎಚ್‌ಪಿಟಿ ತಾಲೂಕು ಸಂಯೋಜಕ ಸಂಜೀವಮೂರ್ತಿ ಹೇಳಿದರು.

ಪಗಡದಿನ್ನಿ ಗ್ರಾಪಂ ವ್ಯಾಪ್ತಿಯ ಮಳ್ಳೂರು ಗ್ರಾಮದ ನಾಲಾ ಹೂಳೆತ್ತುವ ಸ್ಥಳದಲ್ಲಿ ಗ್ರಾಮ ಆರೋಗ್ಯ ಅಭಿಯಾನದಡಿ ಆರೋಗ್ಯದ ಉಚಿತ ತಪಾಸಣೆ ಶಿಬಿರದಲ್ಲಿ ಶುಕ್ರವಾರ ಮಾತನಾಡಿದರು. ಕಾರ್ಮಿಕರು ದುಡಿತದ ಭರದಲ್ಲಿ ಆರೋಗ್ಯ ನಿರ್ಲಕ್ಷ್ಯಿಸುತ್ತಿದ್ದಾರೆ. ಇದರಿಂದ ದುಡಿದ ಹಣವನ್ನು ಆಸ್ಪತ್ರೆಯ ವೆಚ್ಚಕ್ಕೆ ನೀಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯದ ಕಾಳಜಿ ವಹಿಸಿ, ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬೇಕು. ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು. ಐಇಸಿ ಸಂಯೋಜಕ ಥಾಮಸ್, ಬಿಎಫ್‌ಟಿ ಅಶೋಕ, ನರೇಗಾ ಮೇಟಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net