ಸಾಧನೆಗೆ ಪ್ರೇರೇಪಿಸುವ ಪ್ರೋತ್ಸಾಹ

25102022 Sindhanour pinjar camunity honor
Published on

ಸಿಂಧನೂರು: ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿದಾಗ ಸಾಧನೆಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ರಾಜ್ಯ ನದಾಫ್/ಪಿಂಜಾರ ಸಂಘದ ಜಿಲ್ಲಾ ಕಾರ್ಯದರ್ಶಿ ಶೇಕ್ಷಾವಲಿ ಬೂತಲದಿನ್ನಿ ಹೇಳಿದರು.

ನಗರದ ನದಾಫ್/ಪಿಂಜಾರ ತಾಲೂಕ ಘಟಕ ಕಚೇರಿಯಲ್ಲಿ ಪಿಂಜಾರ ಸಮುದಾಯದ ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ತಳ ಸಮುದಾಯದವರು ಶಿಕ್ಷಣ ಪಡೆದು, ಉನ್ನತ ಹುದ್ದೆ ಪಡೆಯುವುದು ಸುಲಭವಲ್ಲ. ಕಠಿಣ ಶ್ರಮ ಹಾಗೂ ಇಚ್ಛಾಶಕ್ತಿ ಇದ್ದರೆ ಸಾಧನೆ ಮಾಡಬಹುದು ಎಂದರು.

ಪೊಲೀಸ್ ಇಲಾಖೆಗೆ ಆಯ್ಕೆಯಾದ ರಶೀದ್ ಬೂತಲದಿನ್ನಿ, ಜಿಟಿಟಿಸಿ ತರಬೇತಿ ಕಾಲೇಜಿಗೆ ತಾಂತ್ರಿಕ ಸಹಾಯಕರಾಗಿ ಆಯ್ಕೆಯಾದ ಮೊಹಿನುದ್ದೀನ್ ಬೂತಲದಿನ್ನಿ, ಹೈದ್ರಾಬಾದ್ ಉಸ್ಮಾನಿಯಾ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದ ಕೆ.ಖಾದರ್ ಬಾಷಾರನ್ನು ಸನ್ಮಾನಿಸಲಾಯಿತು. ಸಮುದಾಯದ ಪ್ರಮುಖರಾದ ಖಾಜಾಸಾಬ್ ಮಾಡಗಿರಿ, ಮೌಲಾಸಾಬ್, ಖಾನ್‌ಸಾಬ್, ಹುಸೇನ್‌ಸಾಬ್ ಪರಾಪುರ, ಮಹ್ಮದ್ ಅಲಿ, ಖಾದರ್ ಬಾಷಾ ಮುಳ್ಳೂರು, ಹುಸೇನ್‌ಸಾಬ್, ರಹಮತ್ ಅಲಿ, ಡಾ.ಶರೀಫ್‌ಸಾಬ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net