ಸಿಂಧನೂರು ನಗರಸಭೆ ಹಂಗಾಮಿ ಅಧ್ಯಕ್ಷೆ ಮಂಜುಳಾ

UNTILETED (2)
Published on

ಸಿಂಧನೂರು: ಸ್ಥಳೀಯ ನಗರಸಭೆ ಹಂಗಾಮಿ ಅಧ್ಯಕ್ಷರಾಗಿ ಮಂಜುಳಾ ಪ್ರಭುರಾಜ ಬುಧವಾರ ಅಧಿಕಾರ ಸ್ವೀಕರಿಸಿದರು.

ಶಾಸಕರು ಸೇರಿದಂತೆ ನಗರಸಭೆ ಸದಸ್ಯರ, ಅಧಿಕಾರಿಗಳ ಹಾಗೂ ಸಿಬ್ಬಂದಿ ಸಲಹೆ ಸಹಕಾರ ಪಡೆದು ಉತ್ತಮ ಆಡಳಿತ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಬೇಸಿಗೆಯಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ, ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹಂಗಾಮಿ ಅಧ್ಯಕ್ಷೆ ಮಂಜುಳಾ ತಿಳಿಸಿದರು.

ಕಾಂಗ್ರೆಸ್ ಪ್ರಮುಖರಾದ ಎಂ.ಕಾಳಿಂಗಪ್ಪ ವಕೀಲ, ಪಂಪನಗೌಡ ಬಾದರ್ಲಿ, ಜಾಫರ್ ಅಲಿ ಜಾಹಗೀರ್‌ದಾರ್, ಛತ್ರಪ್ಪ ಕುರಕುಂದಿ, ಖಾಜಿಮಲಿಕ್ ವಕೀಲ, ನಗರಸಭೆ ಸದಸ್ಯರಾದ ಶಬ್ಬೀರ್ ಅಹ್ಮದ್, ಚಂದ್ರಶೇಖರ ಮೈಲಾರ್, ಡಿ.ಸತ್ಯನಾರಾಯಣ, ಮೆಹಬೂಬ್ ಡೋಂಗ್ರಿ, ಸಣ್ಣ ವೀರಭದ್ರಪ್ಪ, ಆಲಂಬಾಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net