ರೈಲ್ವೆ ಕಾಮಗಾರಿ ತ್ವರಿತ ಪೂರ್ಣಗೊಳಿಸಿ; ಜನರಲ್ ಮ್ಯಾನೇಜರ್ ಸಂಜೀವ ಕಿಶೋರಗೆ ಸಂಸದ ಸಂಗಣ್ಣ ಕರಡಿ ಮನವಿ

Sindhanour MP Sanganna Karadi visit to railway officer
ದಕ್ಷಿಣ ಮಧ್ಯೆ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ ಕಿಶೋರಗೆ ಸಂಸದ ಸಂಗಣ್ಣ ಕರಡಿ ಗುರುವಾರ ಮನವಿ ಸಲ್ಲಿಸಿದರು.
Published on


ಸಿಂಧನೂರು: ಕೊಪ್ಪಳ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ಹಾಗೂ ಮಂದಗತಿಯಲ್ಲಿ ನಡೆದಿರುವ ರೈಲ್ವೆ ಕಾಮಗಾರಿಗಳನ್ನು ಶೀಘ್ರ ಮುಗಿಸಬೇಕೆಂದು ದಕ್ಷಿಣ ಮಧ್ಯೆ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ ಕಿಶೋರಗೆ ಸಂಸದ ಸಂಗಣ್ಣ ಕರಡಿ ಬೆಂಗಳೂರಿನಲ್ಲಿ ಗುರುವಾರ ಮನವಿ ಸಲ್ಲಿಸಿದರು.

ತಡಕಲ್‌ನಿಂದ ಕುಷ್ಟಗಿ ರೈಲ್ವೆ ಬಿ.ಜಿ.ಲೈನ್ ಕಾಮಗಾರಿ, ಕಾರಟಗಿಯಿಂದ ಸಿಂಧನೂರು ಬಿ.ಜಿ.ಲೈನ್, ತಳಕಲ್‌ನಿಂದ ಸಂಗನ್‌ಕಲ್, ಬಳಿ (ತೋಡಿಹಾಳ-ದ್ಯಾಂಪುರ ರಸ್ತೆ) 5 ಫೀಟ್ ಆಳದಲ್ಲಿ ನಡೆದಿರುವ ಕಾಮಗಾರಿ ಸ್ಥಳದಲ್ಲಿ ಮಳೆಯಿಂದಾಗಿ ನೀರು ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಮಳೆ ಕಾರಣಕ್ಕೆ ಗುಂತಕಲ್-ಹುಬ್ಬಳ್ಳಿ ಮಾರ್ಗದಲ್ಲಿ ರೈಲುಗಳು ಎರಡು ತಾಸು ತಡವಾಗಿ ಬರುತ್ತಿವೆ. ಇದರಿಂದಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕುಷ್ಟಗಿ ಗೇಟ್‌ಬಳಿ (ಆರ್‌ಒಬಿ 66) ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಬೇಕು. ಬಾಗಲಕೋಟೆ-ದರೋಜಿ ಹೊಸ ರೈಲ್ವೆ ಮಾರ್ಗದ ಸರ್ವೇ ಕಾರ್ಯ ತೀವ್ರಗೊಳಿಸಬೇಕು ಎಂದು ಒತ್ತಾಯಿಸಿದರು.

ಬನ್ನಿಕೊಪ್ಪದ ಬಳಿ ನಡೆದಿರುವ ಕಾಮಗಾರಿಯ ಮಾಹಿತಿ ನೀಡಬೇಕು. ಮುನಿರಾಬಾದ್ ನಿಲ್ದಾಣದಲ್ಲಿ ಸ್ವಚ್ಛತೆ ಕೈಗೊಳ್ಳುವುದರೊಂದಿಗೆ ಪ್ಲಾಟ್‌ಫಾರಂ ರೂಫ್‌ಶೀಟ್‌ಗಳನ್ನು ಅಳವಡಿಸಬೇಕು. ಕಾರಟಗಿ ನಿಲ್ದಾಣದಲ್ಲಿ ಗೂಡ್ಸ್ ಶೆಡ್ ಪ್ಲಾಟ್‌ಫಾರಂ ಕಾಮಗಾರಿ ತ್ವರಿತ ಪೂರ್ಣಗೊಳಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net