ಮೋದಿ ಆಡಳಿತದಿಂದ ದೇಶ ಸುಭದ್ರ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿಕೆ

280922 Sindhnoor Blood Donation Camp
ಸಿಂಧನೂರು ತಾಲೂಕಿನ ಗೋಮರ್ಸಿಯಲ್ಲಿ ಬಿಜೆಪಿ ಯುವಮೋರ್ಚಾದಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾರತ ಮಾತೆ ಮತ್ತು ಜನಸಂಘದ ಪ್ರಮುಖರಿಗೆ ನಮನ ಸಲ್ಲಿಸಲಾಯಿತು.
Published on

ಸಿಂಧನೂರು: ಪ್ರಧಾನಿ ನರೇಂದ್ರ ಮೋದಿ ಸಮರ್ಥ ಆಡಳಿತದಿಂದ ದೇಶ ಸುಭದ್ರವಾಗಿದ್ದು, ಜನರು ನೆಮ್ಮದಿಯಿಂದ ಬದುಕುವಂತಾಗಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.

ತಾಲೂಕಿನ ಗೋಮರ್ಸಿ ಗ್ರಾಮದ ನಿರುಪಾದೇಶ್ವರ ಮಠದಲ್ಲಿ ಬಿಜೆಪಿ ಗ್ರಾಮೀಣ ಮತ್ತು ನಗರ ಮಂಡಲ ಯುವಮೋರ್ಚಾದಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಮಂಗಳವಾರ ಮಾತನಾಡಿದರು. ನರೇಂದ್ರ ಮೋದಿ ಯಾವುದೇ ವೈಭವೀಕರಣ ಇಲ್ಲದೆ ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಬಿಜೆಪಿ ಕೊಟ್ಟಿರುವ ಕೊಡುಗೆಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net