ಶಾಸಕ ಯತ್ನಾಳ ಕ್ಷಮೆಯಾಚಿಸಲಿ

Untitled design 7
Published on

ಸಿಂಧನೂರು: ಪಹಣಿಯಲ್ಲಿ ವಕ್ಫ್ ನಮೂದು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ಜಗಜ್ಯೋತಿ ಬಸವಣ್ಣ ಅವರ ಕುರಿತು ಅವಹೇಳನ ಮಾಡಿರುವುದು ಖಂಡನೀಯ ಎಂದು ಬಸವಕೇಂದ್ರದ ಸ್ಥಳೀಯ ಘಟಕದ ಅಧ್ಯಕ್ಷ ಕೆರೇಗೌಡ ಕುರಕುಂದಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಕ್ಫ್ ವಿಚಾರದಲ್ಲಿ ನಿರ್ಲಕ್ಷ್ಯವಹಿಸಿದರೆ ಬಸವಣ್ಣನಂತೆ ಹೊಳ್ಯಾಗ ಜಿಗಿರಿ, ಇಲ್ಲವೇ ಸಾಬ್ರು ಆಗ್ರಿ ಎಂದು ಯತ್ನಾಳ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಸವಣ್ಣ ಅವರ ಅನುಯಾಯಿಗಳಿಗೆ ನೋವುಂಟು ಮಾಡಿದ್ದು, ಕೂಡಲೇ ಬಸನಗೌಡ ಪಾಟೀಲ್ ಯತ್ನಾಳ ಕ್ಷಮೆಯಾಚಿಸಬೇಕು. 12ನೇ ಶತಮಾನದ ಶರಣರ ಬಗ್ಗೆ ಈ ರೀತಿ ಮಾತನಾಡುವುದನ್ನು ಬಿಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದರು. ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪಿ.ರುದ್ರಪ್ಪ, ತಾಲೂಕು ಅಧ್ಯಕ್ಷ ವೀರಭದ್ರಗೌಡ ಅಮರಾಪುರ, ನಗರಸಭೆ ಮಾಜಿ ಅಧ್ಯಕ್ಷ ಕೆ.ಶರಣಪ್ಪ ತೆಂಗಿನಕಾಯಿ, ವೀರನಗೌಡ, ಎಚ್.ಜಿ.ಹಂಪಣ್ಣ, ಚಂದ್ರೇಗೌಡ ಹರೇಟನೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net