

ಸಿಂಧನೂರು: ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಪದವಿ ಫಲಿತಾಂಶ ಪ್ರಕಟಿಸುವುದು ವಿಳಂಬವಾದ ಕಾರಣ, ಬಿ.ಇಡಿ ದಾಖಲಾತಿ ಪರಿಶೀಲನೆಗೆ ಸಮಸ್ಯೆಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಾಸಕ ವೆಂಕಟರಾವ ನಾಡಗೌಡಗೆ ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರ ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳು ಬಿ.ಇಡಿಗೆ ಅರ್ಹತೆ ಪಡೆದಿದ್ದರೂ, ವಿಶ್ವವಿದ್ಯಾಲಯದ ಬೇಜವಾಬ್ದಾರಿ ನಡೆಯಿಂದ ಅಂಕಪಟ್ಟಿ ಇಲ್ಲದೆ ದಾಖಲಾತಿಗಳ ಪರಿಶೀಲನೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಈ ಕೂಡಲೇ ಬಿ.ಇಡಿ ಪ್ರವೇಶಾತಿಯ ದಾಖಲಾತಿ ಪರಿಶೀಲನಾ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು. ವಿವಿ ಕುಲಪತಿಗೆ ಶಾಸಕ ನಾಡಗೌಡ ಕರೆ ಮಾಡಿ ತ್ವರಿತ ಅಂಕಪಟ್ಟಿ ನೀಡಬೇಕೆಂದು ಒತ್ತಾಯಿಸಿದರು.