ಅಂಗನವಾಡಿಗಳ ಅಭಿವೃದ್ಧಿಗೆ ಆದ್ಯತೆ, ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ

MANAVI
ಸಿಂಧನೂರು ತಾಲೂಕಿನ ಆರ್.ಎಚ್. ಕಾಲನಿಯಲ್ಲಿ ಗ್ರಾಪಂ ನಿಧಿಯಡಿ ಅಂಗನವಾಡಿಗಳಿಗೆ ಪಿಠೋಪಕರಣಗಳನ್ನು ಶಾಸಕ ಹಂಪನಗೌಡ ಬಾದರ್ಲಿ ಬುಧವಾರ ವಿತರಿಸಿದರು. ಗ್ರಾಪಂ ಅಧ್ಯಕ್ಷ ರಹಮತ್‌ಪಾಷಾ, ಸದಸ್ಯ ಸಿರಿಲ್, ಗ್ರಾಪಂ ಪಿಡಿಒ ಪೂರ್ಣಿಮಾ, ಸ್ತ್ರೀಶಕ್ತಿ ಒಕ್ಕೂಟ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಇದ್ದರು.
Published on

ಸಿಂಧನೂರು: ತಾಲೂಕಿನ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಮುಂದಾಗಿದ್ದು, ಗ್ರಾಪಂ ನಿಧಿಯಿಂದ ಪಿಠೋಪಕರಣಗಳನ್ನು ಒದಗಿಸಲಾಗುತ್ತಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ತಾಲೂಕಿನ ಆರ್.ಎಚ್.ಕಾಲನಿಯಲ್ಲಿ ಗ್ರಾಪಂ ನಿಧಿಯಡಿ ಹಮ್ಮಿಕೊಂಡಿದ್ದ ಅಂಗನವಾಡಿಗಳಿಗೆ ಪಿಠೋಪಕರಣ ವಿತರಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಈಗಾಗಲೇ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲಾಗಿದ್ದು, ಈಗ ವಿಶೇಷ ಕಾಳಜಿ ವಹಿಸಿ ಗ್ರಾಪಂಗಳ ನಿಧಿಯಿಂದ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳಿಗೆ ಪಿಠೋಪಕರಣ ನೀಡಲಾಗಿದೆ. ಇವುಗಳ ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಶುದ್ಧ ಕುಡಿವ ನೀರು ಪೂರೈಕೆ ಮಾಡಬೇಕು ಎಂದರು.

ಸಿಡಿಪಿಒ ಲಿಂಗನಗೌಡ ಯೋಜನೆ ಬಗ್ಗೆ ಮಾಹಿತಿ ನೀಡಿ, ಆರ್.ಎಚ್. 1 ಕ್ಯಾಂಪ್ ವ್ಯಾಪ್ತಿಯಲ್ಲಿ 19 ಅಂಗನವಾಡಿ ಕೇಂದ್ರಗಳಿಗೆ ಪಿಠೋಪಕರಣ ನೀಡಲಾಗುವುದು. ಅಲಮೇರ, ನೀರು ಶುದ್ಧೀಕರಣ ಘಟಕ ನೀಡಿದ್ದೇವೆ ಎಂದರು.

ತಾಪಂ ಇಒ ಚಂದ್ರಶೇಖರ, ಗ್ರಾಪಂ ಅಧ್ಯಕ್ಷ ರಹಮತ್‌ಪಾಷಾ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಪಿಡಿಒ ಪೂರ್ಣಿಮಾ, ಅಂಗನವಾಡಿ ಕಾರ್ಯಕರ್ತೆ ಆದಿಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net