

ಸಿಂಧನೂರು: ಮಸ್ಕಿ ತಾಲೂಕಿನ ಬೊಮ್ಮನಾಳ(ಯು) ಗ್ರಾಮದಲ್ಲಿ ಸೋಮವಾರ ತಡರಾತ್ರಿ ಮೊಹರಂ ಆಚರಣೆ ವೇಳೆ ನಿಯಂತ್ರಣ ತಪ್ಪಿದ ಭಕ್ತ, ಸ್ಥಳೀಯ ನಿವಾಸಿ ಯಮನಪ್ಪ ನಾಯಕ (49) ಬೆಂಕಿ ಕೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಭಕ್ತರು ಪ್ರತಿಷ್ಠಾಪಿಸಿದ್ದ ಅಲಾಯಿ ದೇವರ ಮುಂದೆ ಬೆಂಕಿ ಕೊಂಡ ಏರ್ಪಾಡು ಮಾಡಲಾಗಿತ್ತು. ದೊಡ್ಡದೊಡ್ಡ ಒಣಗಿದ ಮರದ ದಿಮ್ಮೆಗಳನ್ನು ಕೊಂಡದಲ್ಲಿ ಹಾಕಿ, ಅದಕ್ಕೆ ಬೆಂಕಿ ಹಚ್ಚಲಾಗಿತ್ತು. ಕೊಂಡದ ಸುತ್ತಲೂ ಬೆಂಕಿ ಆವರಿಸಿತ್ತು. ಎಲ್ಲರಂತೆ ಬೆಂಕಿ ಕೊಂಡ ಹಾಯಲು ಮುಂದಾಗಿದ್ದ ಯಮನಪ್ಪ ನಾಯಕ ಒಮ್ಮಿಂದಲೇ ನಿಯಂತ್ರಣ ತಪ್ಪಿ ಕೆಂಡದೊಳಗೆ ಬಿದ್ದಿದ್ದ್ದಾರೆ.
ಈ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಲ್ಲಿದ್ದವರು ಬೆಂಕಿ ಆರಿಸಲು ನೀರು ಹಾಕಿದರೂ ಅಷ್ಟರೊಳಗೆ ಭಕ್ತ ಸುಟ್ಟು ಕರಕಲಾಗಿದ್ದರು.