ರೇಣುಕಾಚಾರ್ಯರ ಜಯಂತಿಗೆ ಸಿದ್ಧತೆ ನಡೆಯಲಿ

Sindhanour Sri Renukacharya Jayanti pre meeting
ಸಿಂಧನೂರಿನಲ್ಲಿ ಹಮ್ಮಿಕೊಂಡಿದ್ದ ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿದರು. ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು, ಬಂಗಾರಿಕ್ಯಾಂಪಿನ ಸಿದ್ಧರಾಮೇಶ್ವರ ಶರಣರು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ರಾಮನಗೌಡ ಮಲ್ಕಾಪುರ, ವೀರೇಂದ್ರ ಪ್ರಸಾದ ಎಂ. ಇದ್ದರು.
Published on

ಸಿಂಧನೂರು: ಎಲ್ಲರೂ ಒಗ್ಗೂಡಿ ಮಾ. 12 ರಂದು ಶ್ರೀ ರೇಣುಕಾಚಾರ್ಯರ ಜಯಂತಿ ಅದ್ದೂರಿಯಾಗಿ ಆಚರಿಸಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಹೇಳಿದರು.

ನಗರದ ಕೋಟೆ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶ್ರೀ ರೇಣುಕಾಚಾರ್ಯರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರತಿ ವರ್ಷದಂತೆ ರೇಣುಕಾಚಾರ್ಯರ ಜಯಂತಿಗೆ ಅಗತ್ಯ ಸಿದ್ಧತೆಗಳು ನಡೆಯಲಿ. ಅವರಿವರು ಎನ್ನದೆ ಎಲ್ಲರೂ ಪಾಲ್ಗೊಳ್ಳಬೇಕು. ಅಂದಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು.

ಸಾನ್ನಿಧ್ಯವಹಿಸಿದ್ದ ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿ, ಎಲ್ಲರ ಸಹಕಾರವಿದ್ದರೆ ಜಯಂತಿ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಈ ವರ್ಷವೂ ಮೂರುಮೈಲ್‌ಕ್ಯಾಂಪ್‌ನ ರೇಣುಕಾಚಾರ್ಯರ ದೇವಸ್ಥಾನದಿಂದ ಕಳಸ-ಕುಂಭೋತ್ಸವ ಜರುಗಲಿದೆ. ಉಳಿದಂತೆ ಶ್ರೀ ರೇಣುಕಾಚಾರ್ಯರ ಮೂರ್ತಿಗೆ ಮಹಾರುದ್ರಾಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯಗಳು, ಧಾರ್ಮಿಕ ಸಭೆ ಜರುಗಲಿದೆ ಎಂದರು.

ಬಂಗಾರಿ ಕ್ಯಾಂಪ್ ಸಿದ್ಧರಾಮೇಶ್ವರ ಸ್ವಾಮೀಜಿ, ಬಪ್ಪೂರು ಶಾಂಭವಿಮಠದ ದೇವಯ್ಯಸ್ವಾಮಿ, ವೀರಶೈವ ಮಹಾಸಭಾದ ಅಧ್ಯಕ್ಷ ರಾಮನಗೌಡ ಮಲ್ಕಾಪುರ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ವೀರೇಂದ್ರ ಪ್ರಸಾದ ಎಂ., ಅಮರಯ್ಯಸ್ವಾಮಿ ಅಲಬನೂರು, ರಾಜಶೇಖರ ಪಾಟೀಲ್, ರವಿ ಹಿರೇಮಠ, ವೀರೇಶ ಯಡಿಯೂರಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net