ಮನೆಗಳಂತೆ ಮದಿರವೂ ಶುಚಿಯಾಗಿರಲಿ, ಮುಖ್ಯಶಿಕ್ಷಕಿ ವನಮಾಲಾ ಕೆಂಗಲ್ ಹೇಳಿಕೆ

DEVARU
Published on

ಸಿಂಧನೂರು: ಮಂದಿರ ಮತ್ತು ಸಭಾಭವನಗಳನ್ನು ಮನೆಗಳಂತೆ ಶುಚಿಯಾಗಿಟ್ಟುಕೊಳ್ಳಬೇಕು ಎಂದು ಗೊರೇಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ವನಮಾಲಾ ಕೆಂಗಲ್ ಹೇಳಿದರು.

ತಾಲೂಕಿನ ರೌಡಕುಂದ ಗ್ರಾಮದ ಲಕ್ಷ್ಮೀಬಂಡೆ ರಂಗನಾಥ ದೇವಸ್ಥಾನದ ಶ್ರೀದೇವಿ ಭೂದೇವಿ ನೂತನ ಸಭಾಭವನ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ದೇವಸ್ಥಾನ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಅವಿರತ ಶ್ರಮದಿಂದ ಸಭಾ ಭವನ ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು, ಭಕ್ತಾದಿಗಳು ತಮ್ಮ ಮನೆಗಳಂತೆ ಶುಚಿಯಾಗಿಟ್ಟುಕೊಳ್ಳಬೇಕು. ಯಾವುದೇ ಕಾರ್ಯಕ್ರಮ ನಡೆದ ಕೂಡಲೇ ಸಭಾಭವನ ಶುಚಿಗೊಳಿಸಿ ಅದರ ಅಂದ ಕೆಡದಂತೆ ಕಾಪಾಡಿಕೊಳ್ಳಬೇಕು ಎಂದರು.

ರೌಡಕುಂದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಆಶಾ ಬಳಿಗಾರ, ಹುಬ್ಬಳ್ಳಿ ಮಹಾನಗರ ಪಾಲಿಕೆ ಸಹಾಯಕ ಇಂಜಿನಿಯರ್ ಚೈತ್ರಾ, ಸಿರಗುಪ್ಪಾ ಶಿಕ್ಷಕಿ ಲಕ್ಷ್ಮೀ, ಬಳ್ಳಾರಿಯ ಆರ್. ಲಕ್ಷ್ಮೀ, ಮಸ್ಕಿಯ ಸುಧಾ, ಸಿಂಧನೂರಿನ ಜಾನಕಿ ಕುಲಕರ್ಣಿ, ಲತಾಂಜಲಿ, ಸಂಪದಾ, ಜಯಶ್ರೀ, ಜ್ಯೋತಿ, ಮೀನಾಕ್ಷಿ, ಪ್ರಭಾ ಗುಡಿ, ಗಿರಿಯಮ್ಮ, ಅನ್ನಪೂರ್ಣಮ್ಮ, ರೇಣುಕಾ, ದೇವಸ್ಥಾನ ಸಮಿತಿ ಅಧ್ಯಕ್ಷ ರಾಘವೇಂದ್ರರಾವ ಕುಲಕರ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net