ಅಳತೆ ಪ್ರಕಾರ ಕೆಲಸ ಮಾಡಲಿ

ಮಾವಿನಮಡುಗು ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಚಂದ್ರಶೇಖರ ಹಾಗೂ ಸಹಾಯಕ ನಿರ್ದೇಶಕ ಆಲಂಬಾಷಾ ಭೇಟಿ ನೀಡಿ, ಪರಿಶೀಲಿಸಿದರು. ಪಿಡಿಒ ಚನ್ನಬಸವ, ತಾಂತ್ರಿಕ ಸಂಯೋಜಕ ಮೆಹಬೂಬ್, ತಾಂತ್ರಿಕ ಸಹಾಯಕ ಥಾಮಸ್, ವಿರೂಪಾಕ್ಷರೆಡ್ಡಿ, ಬಿಎಫ್‌ಟಿ ಹಾಗೂ ಕಾಯಕ ಬಂಧುಗಳು, ಕೂಲಿ ಕಾರ್ಮಿಕರು ಇದ್ದರು.

Published on

ಸಿಂಧನೂರು: ತಾಲೂಕಿನ ಚನ್ನಳ್ಳಿ ಗ್ರಾಪಂ ವ್ಯಾಪ್ತಿಯ ಮಾವಿನಮಡುಗು ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ತಾಪಂ ಇಒ ಚಂದ್ರಶೇಖರ ಹಾಗೂ ಸಹಾಯಕ ನಿರ್ದೇಶಕ ಆಲಂಬಾಷಾ ಮಂಗಳವಾರ ಭೇಟಿ ನೀಡಿ, ಪರಿಶೀಲಿಸಿದರು.

ನರೇಗಾ ಕಾರ್ಮಿಕರ ಕೂಲಿ ಮೊತ್ತ ಏ.1ರಿಂದ 370 ರೂ.ಗೆ ಸರ್ಕಾರ ಹೆಚ್ಚಿಸಿದೆ. ಏಪ್ರಿಲ್, ಮೇ , ಜೂನ್‌ನಲ್ಲಿ ನಿರಂತರವಾಗಿ 100 ದಿನ ಕೆಲಸ ನೀಡಲಾಗುವುದು, ಸರ್ಕಾರದ ಆದೇಶದಂತೆ ಏಪ್ರಿಲ್ ಮತ್ತು ಮೇನಲ್ಲಿ ಶೇ.30 ರಿಯಾಯಿತಿ ಕುರಿತು ಮತ್ತು ಪೂರ್ಣ ಪ ್ರಮಾಣದ ಕೂಲಿ ಮೊತ್ತ ಸಿಗಬೇಕಾದರೆ ಅಳತೆ ಪ್ರಕಾರ ಕೆಲಸ ಮಾಡಬೇಕು ಎಂದು ಕೂಲಿಕಾರರಿಗೆ ತಿಳಿಸಿದರು. ಕಾಮಗಾರಿ ಸ್ಥಳದಲ್ಲಿ ಕುಡಿವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ನೆರಳಿನ ವ್ಯವಸ್ಥೆ ಮಾಡಲು ಪಿಡಿಒಗೆ ಸೂಚಿಸಿದರು. ನಂತರ ಹಾಜರಾತಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net