ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ ಕಲ್ಪಿಸಲು ಕ್ರಮ; ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ

Sindhanour School Building Construction
ಸಿಂಧನೂರು ತಾಲೂಕಿನ ಮಾಡಸಿರವಾರ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಕಟ್ಟಡ ನಿರ್ಮಾಣಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಭೂಮಿಪೂಜೆ ನೆರವೇರಿಸಿದರು. ಎಸ್ಡಿಎಂಸಿ ಅಧ್ಯಕ್ಷ ಬೂದಿಯಪ್ಪ, ಗ್ರಾಪಂ ಅಧ್ಯಕ್ಷ ರಾಜು, ಮುಖ್ಯಶಿಕ್ಷಕರಾದ ವೀರೇಶ ಸಾಲಿಮಠ, ಶ್ರೀನಿವಾಸ, ಮಾಡಸಿರವಾರ ಪಿಡಿಒ ಜಯಶ್ರೀ ಇತರರಿದ್ದರು.
Published on

ಸಿಂಧನೂರು: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಆ ನಿಟ್ಟಿನಲ್ಲಿ ಹಂತ ಹಂತವಾಗಿ ಶಾಲೆಗಳಿಗೆ ಹೊಸ ಕಟ್ಟಡ ನೀಡಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ತಾಲೂಕಿನ ಸೋಮಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ 2023-24 ಕೆಕೆಆರ್‌ಡಿಬಿ ಮೈಕ್ರೋ ಅಕ್ಷರ ಆವಿಷ್ಕಾರ ಅನುದಾನದಡಿ 199 ಲಕ್ಷ ರೂ. ವೆಚ್ಚದ ಕಟ್ಟಡ ಹಾಗೂ ಸ್ಮಾರ್ಟ್ ಕ್ಲಾಸ್, ಬೂದಿವಾಳ ಸರ್ಕಾರಿ ಪ್ರೌಢ ಶಾಲೆಗೆ 1 ಕೋಟಿ ರೂ. ಹಾಗೂ ಮಾಡಸಿರವಾರ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದ ಸರ್ಕಾರಿ ಪ್ರೌಢ ಶಾಲೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾಲೂಕಿನಲ್ಲಿ ಕೆಕೆಆರ್‌ಡಿಬಿ ಮೈಕ್ರೋ ಅಕ್ಷರ ಆವಿಷ್ಕಾರ ಯೋಜನೆಯಡಿ 40 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಆರಂಭಿಸಲಿದ್ದು ಇದರಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸರ್ಕಾರಿ ಶಾಲೆಯಲ್ಲಿಯೂ ಎಲ್ಲಾ ರೀತಿಯ ಮೂಲ ಸೌಲಭ್ಯ ಒದಗಿಸುವುದು ನಮ್ಮ ಉದ್ದೇಶವಾಗಿದೆ. ತಾಲೂಕಿನ ತುರ್ವಿಹಾಳ ಬಳಿ 119.11 ಎಕರೆಯಲ್ಲಿ ಕುಡಿವ ನೀರಿನ ಕೆರೆ ನಿರ್ಮಾಣಕ್ಕೂ 29.80 ಕೋಟಿ ರೂ. ಸಚಿವ ಸಂಪುಟ ಒಪ್ಪಿಗೆ ಸಿಕ್ಕಿದೆ. ಇದರಿಂದ ಮುಂದಿನ ದಿನಗಳಲ್ಲಿ ನಗರದಲ್ಲಿ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.

ಕಪಿಲಸಿದ್ದರಾಮೇಶ ಶರಣರು, ಸೋಮಲಾಪುರ ಗ್ರಾಪಂ ಅಧ್ಯಕ್ಷ ರೇಣುಕಮ್ಮ, ಸದಸ್ಯರಾದ ತಿಮ್ಮಾರೆಡ್ಡಿ, ಶರಣೇಗೌಡ, ಶೇಖರಪ್ಪ, ಎಸ್ಡಿಎಂಸಿ ಅಧ್ಯಕ್ಷ ಚಂದ್ರಗೌಡ, ರಂಗಣ್ಣ, ಪ್ರಮುಖರಾದ ರಾಜುಗೌಡ ಬಾದರ್ಲಿ, ಖಾಜಿ ಮಲ್ಲಿಕ್ ವಕೀಲ, ಅಶೋಕ ಉಮಲೂಟಿ, ಛತ್ರಪ್ಪ, ದುರುಗಪ್ಪ ಕಟಾಲಿ, ಮುಖ್ಯಶಿಕ್ಷಕಿ ನಿರ್ಮಲಾ, ಸಾಬಣ್ಣ ವಗ್ಗರ್, ದೊಡ್ಡಬಸಪ್ಪ ಯರಡೋಣಿ ಬೂದಿವಾಳ, ಲೋಕೇಶಗೌಡ, ವಿರುಪಣ್ಣ, ಸಿದ್ದರಾಮಪ್ಪ ಮಾಡಸಿರವಾರ, ಶ್ರೀನಿವಾಸ, ಪಂಚಾಯತ್ ರಾಜ್ ಇಲಾಖೆ ಎಇಇ ಶಿವಪ್ಪ, ಜೆಇ ಮೌನೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net