ಬಡವರಿಗೆ ನಿವೇಶವನ ಸೌಲಭ್ಯ ಒದಗಿಸಿ

Untitled design (2)
ಸಿಂಧನೂರಿನ ತಹಸಿಲ್ ಕಚೇರಿ ಮುಂಭಾಗ ಕನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಶುಕ್ರವಾರ ಪ್ರತಿಭಟನೆ ನಡೆಸಿತು. ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಜಂತ್ರಿ, ತಾಲೂಕು ಅಧ್ಯಕ್ಷ ಲಕ್ಷ್ಮಣ ಭೋವಿ, ಗೌರವಾಧ್ಯಕ್ಷ ಕಾಳಪ್ಪ ಮೇಸ್ತ್ರೀ, ಪ್ರ.ಕಾರ್ಯದರ್ಶಿ ಶರಣಬಸವ ಮಲ್ಲಾಪುರ ಇದ್ದರು.
Published on

ಸಿಂಧನೂರು: ನಗರದ ವಾರ್ಡ್ 14 ಗಂಗಾನಗರದ 40ನೇ ವಿತರಣಾ ಕಾಲುವೆ ಪಕ್ಕದಲ್ಲಿ ವಾಸವಿರುವ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಗಂಗಾನಗರದ 40ನೇ ಉಪಕಾಲುವೆ ಪಕ್ಕದಲ್ಲಿ 30 ವರ್ಷಗಳ ಮುಂಚಿತವಾಗಿ ಕೃಷಿ ಕೂಲಿ ಕಾರ್ಮಿಕರು ಹಾಗೂ ನಿವೇಶನ ರಹಿತ ಬಡ ಜನರು ಗುಡಿಸಲು, ಶೆಡ್ ಹಾಕಿಕೊಂಡು ವಾಸಿಸುತ್ತಿದ್ದಾರೆ. ನಿವೇಶನಗಳ ಹಕ್ಕುಪತ್ರ ನೀಡಲು ಈಗಾಗಲೇ ಸಾಕಷ್ಟು ಬಾರಿ ಫಲಾನುವಿಗಳ ಜತೆಗೂಡಿ ಸಂಘ-ಸಂಸ್ಥೆಗಳು ನಗರಸಭೆ ಪೌರಾಯುಕ್ತನ ಅವರಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿವೇಶನ ಹಂಚಿಕೆ, ಹಕ್ಕುಪತ್ರ ನೀಡದೆ ಇರುವುದರಿಂದ ಕಾಲುವೆ ಪಕ್ಕದಲ್ಲಿ ವಾಸಿಸುವುದು ಅನಿವಾರ್ಯವಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಶೆಡ್, ಗುಡಿಸಲು ತೆರವು ಗೊಳಿಸಲು ಮುಂದಾಗುವುದು ಸರಿಯಲ್ಲ. ಅವರಿಗೆ ನಿವೇಶನ, ಮನೆ ನಿರ್ಮಿಸಿಕೊಡಬೇಕು. ಈ ಬಗ್ಗೆ ಕೂಡಲೇ ಕ್ರಮಕೈ ಗೊಳ್ಳಬೇಕು. ಇಲ್ಲವಾದರೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಜಂತ್ರಿ, ತಾಲೂಕು ಅಧ್ಯಕ್ಷ ಲಕ್ಷ್ಮಣ ಭೋವಿ, ಗೌರವಾಧ್ಯಕ್ಷ ಕಾಳಪ್ಪ ಮೇಸ್ತ್ರಿ, ಪ್ರದಾನ ಕಾರ್ಯದರ್ಶಿ ಶರಣಬಸವ ಮಲ್ಲಾಪುರ, ನಗರ ಘಟಕ ಅಧ್ಯಕ್ಷ ರಫೀ ಕುನ್ನಟಗಿ, ಪ್ರಮುಖರಾದ ಬಸವರಾಜ ಟೇಲರ್, ಬಾಷಾಸಾಬ, ಸುರೇಶ ಆರ್., ಶ್ರೀಧರ ಆಚಾರ್ಯ, ಮಹಿಬೂಬ ಕುನ್ನಟಗಿ, ಶರಣಪ್ಪ ಬಲ್ಲಟಗಿ, ರವಿ ಬಸಾಪುರ, ಶಂಕ್ರಪ್ಪ, ಮಂಜುನಾಥ ಹಟ್ಟಿ, ಶರಣಪ್ಪ ಬೆಳಗುರ್ಕಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net