

ಸಿಂಧನೂರು: ಆಧುನಿಕ ಮಹಿಳೆ ಸವಾಲುಗಳನ್ನು ಸ್ವೀಕರಿಸಿ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾಳೆ ಎಂದು ಗಂಗಾವತಿ ಸಾಹಿತಿ ರುದ್ರಮ್ಮ ಹಾಸಿನಾಳ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗ ಹಮ್ಮಿಕೊಂಡಿದ್ದ ಆಧುನಿಕ ಮಹಿಳೆಯರ ಸವಾಲುಗಳು ಪುಸ್ತಕ ಬಿಡುಗಡೆ ಹಾಗೂ ಪುಸ್ತಕ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಪಾಲಕರು ಹೆಣ್ಣು ಗಂಡೆಂಬ ಭೇದ ಮಾಡದೆ ಇಬ್ಬರಿಗೂ ಸಮಾನ ಶಿಕ್ಷಣ ನೀಡುತ್ತಿದ್ದಾರೆ. ಮಕ್ಕಳಿಗೆ ತಾಯಿಯೇ ಮೊದಲ ಗುರುವಾಗಿ ಪರಿಣಮಿಸಿದ್ದಾಳೆ. ಸಂಸಾರದ ಕಣ್ಣಾಗಿ ಮುನ್ನಡೆಸುತ್ತಾಳೆ. ಈಗ ಹಲವು ಸವಾಲುಗಳನ್ನು ಸ್ವೀಕರಿಸುತ್ತಾಳೆಯಾದರೂ, ಇನ್ನೂ ಸಾಧನೆ ಮಾಡಲು ಕೆಲ ಅಡ್ಡಿಗಳಾಗುತ್ತಿವೆ ಎಂದರು.
ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾನ್ವಿ ಕಾಲೇಜು ಪ್ರಾಚಾರ್ಯ ಡಾ.ಸುರೇಶ ಶರಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಪ್ರಾಧ್ಯಾಪಕರಾದ ಶಿವಯ್ಯ ಎಂ, ಡಾ.ಹನುಮಂತಪ್ಪ, ಡಾ.ವೆಂಕಟನಾರಾಯಣ, ಡಾ.ಕೆ.ಖಾದರ್‌ಬಾಷಾ, ಡಾ.ಸಂಗನಗೌಡ ಇದ್ದರು.