

ಸಿಂಧನೂರು: ಪ್ರತಿಯೊಬ್ಬರಲ್ಲಿ ಪರಿಸರ ಕಾಳಜಿ ಇರಬೇಕೆಂದು ಲಯನ್ಸ್ ಕ್ಲಬ್ ಸ್ಥಳೀಯ ಘಟಕದ ಮಾಜಿ ಅಧ್ಯಕ್ಷ ನಾಗರಾಜ ಸಾಹುಕಾರ ಮಾಡಸಿರವಾರ ಹೇಳಿದರು.
ನಗರದಲ್ಲಿ ಲಯನ್ಸ್ ಕ್ಲಬ್‌ನಿಂದ ಆಯೋಜಿಸಿದ್ದ 200 ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಪರಿಸರ ಬೆಳೆಸುವುದು ಅತ್ಯಗತ್ಯವಾಗಿದೆ. ಪ್ರಕೃತಿಯಲ್ಲಾಗುತ್ತಿರುವ ಅನಾಹುತಗಳಿಗೆ ನಾವೇ ಕಾರಣರಾಗಿದ್ದೇವೆ. ಪರಿಸರ ಉಳಿದರೆ ನಮ್ಮ ಬದುಕು ಉಳಿಯಲಿದೆ ಎಂಬುದನ್ನು ಅರಿಯಬೇಕು. ದಾನಿಗಳು ಸಸಿ ನೀಡಲು ಮುಂದೆ ಬರುತ್ತಿರುವುದು ಸ್ವಾಗತಾರ್ಹ ಎಂದರು.
ಪ್ರಮುಖರಾದ ವೆಂಕಟೇಶ ಜಿ., ಶಿವರಾಮಕೃಷ್ಣ, ಎನ್.ಶಿವ, ಗಣೇಶ್, ಪ್ರಭಾಕರ ಕುಲಕರ್ಣಿ, ಪದ್ಮಾ ನಾಯ್ಡು, ಜಗದೀಶ, ನೆಕ್ಕಂಟಿ ಸುರೇಶ, ಸಿ.ಎಚ್.ವೆಂಕಟೇಶ್ವರರಾವ್ ಇದ್ದರು.