ನಿರಂತರ ಶೋಷಣೆ ಒಳಗಾಗುತ್ತಿದೆ ದುಡಿಯುವ ವರ್ಗ

Untitled design (8)
Published on

ಸಿಂಧನೂರು: ನಗರದ ಎಪಿಎಂಸಿ ಗಂಜ್ ಎಐಟಿಯುಸಿ ಕಚೇರಿಯಲ್ಲಿ ಗುರುವಾರ ವಿಶ್ವ ಕಾರ್ಮಿಕ ದಿನವನ್ನು ಆಚರಿಸಲಾಯಿತು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಕ್ಯಾತ್ನಟ್ಟಿ ಮಾತನಾಡಿ, ಅಮೆರಿಕದ ಚಿಕಾಗೋದಲ್ಲಿ 8 ಗಂಟೆಗಳ ಕೆಲಸಕ್ಕಾಗಿ ಮಾಲೀಕರ ವಿರುದ್ಧ ದುಡಿಯುವ ಜನರು ಹೋರಾಟ ನಡೆಸಿ ತ್ಯಾಗ-ಬಲಿದಾನ ಮಾಡಿದ ಸಂಕೇತವಾಗಿ ಇಂದು ನಾವು ಕಾರ್ಮಿಕರ ದಿನವನ್ನು ಆಚರಿಸಲಾಗುತ್ತಿದೆ. ದೇಶದಲ್ಲಿ ಇಂದು ಕಾರ್ಮಿಕ ವರ್ಗ ನಿರಂತರ ಶೋಷಣೆಗೊಳಗಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದು 4 ಕೋಡ್‌ಗಳನ್ನಾಗಿ ಮಾಡಿ ಸಂವಿಧಾನಬದ್ಧ ಹಲವು ಹಕ್ಕುಗಳನ್ನು ಕಿತ್ತುಕೊಂಡಿದೆ. ಇಂತಹ ಸರ್ಕಾರಗಳನ್ನು ಕಿತ್ತೊಗೆಯಲು ಕಾರ್ಮಿಕರು ರಾಜಕೀಯ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು, ಮಾರ್ಕ್ಸ್, ಹೆಗೆಲ್, ಲೆನಿನ್ ಅವರ ವಿಚಾರಧಾರೆಗಳೊಂದಿಗೆ ರಾಜ್ಯಾಧಿಕಾರವನ್ನು ಹಿಡಿದು ಕಾರ್ಮಿಕರ ಅಧಿಪತ್ಯ ಸಾಧಿಸಬೇಕೆಂದರು. ಹಮಾಲರ ಸಂಘದ ಹಿರಿಯ ಮುಖಂಡರಾದ ವೆಂಕನಗೌಡ ಗದ್ರಟಗಿ ಪಕ್ಷದ ಧ್ವಜಾರೋಹಣ ನೆರವೇರಿಸಿದರು.

ಸಿಪಿಐ ಮುಖಂಡ ಬಾಷುಮಿಯಾ, ಡಿ.ಎಚ್.ಕಂಬಳಿ ಮಾತನಾಡಿದರು. ದುಡಿಯುವ ಮಹಿಳೆಯರ ಸಂಘದ ಶಾಂತಾ ನಾಗನಗೌಡ, ಈರಮ್ಮ, ಬಿಬನಿ, ಅಂಗನವಾಡಿ ಫೆಡರೇಷನ್‌ನ ಶಾಂತಾ ಗೊರೇಬಾಳ, ಸಾವಿತ್ರಿ ಎಲೆಕೂಡ್ಲಿಗಿ, ನಾಗಲಕ್ಷ್ಮೀ, ಹಮಾಲರ ಸಂಘದ ಹನುಮಂತಪ್ಪ ಹಂಚಿನಾಳ, ಅಮರೇಶ ನಾಯಕ, ಗಂಗಪ್ಪ, ಮುಕ್ತಂಸಾಬ, ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net