ಕ್ರಿಕೆಟ್ ಜತೆಗೆ ಸಾಹಸಮಯ ಕ್ರೀಡೆಯಲ್ಲಿ ತೊಡಗಿಕೊಳ್ಳಿ

2SND-02
Published on

ಸಿಂಧನೂರು: ಕ್ರಿಕೆಟ್ ಜತೆಗೆ ಸಾಹಸಮಯ ಕ್ರೀಡೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಕೆಪೆಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹೇಳಿದರು.

ತಾಲೂಕಿನ ಗಿಣಿವಾರದಲ್ಲಿ ಮಾರುತಿ ಕ್ರಿಕೆಟ್ ಕ್ಲಬ್ ವತಿಯಿಂದ 4ನೇ ಬಾರಿಗೆ ಆಯೋಜಿಸಿದ್ದ ಗ್ರಾಮೀಣ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಯುವಕರಲ್ಲಿ ಉತ್ಸಾಹ, ಶ್ರಮದಾಯಕ ಕೆಲಸಗಳು ಹೆಚ್ಚಬೇಕು. ಇತ್ತೀಚೆಗೆ ಆಕಸ್ಮಿಕ ಸಾವುಗಳು ಹೆಚ್ಚಾಗುತ್ತಿವೆ. ಇದಕ್ಕೆ ಶ್ರಮವಿಲ್ಲದ ಜೀವನ ಕಾರಣವಾಗಿದೆ. ಹೀಗಾಗಿ ಕ್ರಿಕೆಟ್ ಜತೆಗೆ ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಪುರಸಭೆ ಮಾಜಿ ಅಧ್ಯಕ್ಷ ಕೆ.ಮರಿಯಪ್ಪ, ಬೂದಿವಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಯ್ಯ ಮಾಡಸಿರವಾರ, ಶ್ರೀನಿವಾಸ ಗೋಮರ್ಸಿ, ಸಿದ್ದು ಹೂಗಾರ, ಸುರೇಶ ಸಿದ್ದಾಪುರ, ಸಾಬಣ್ಣ ಗಿಣಿವಾರ, ಶಶಿಧರ ಹಿರೇಮಠ, ಶಿವಕುಮಾರ ಬಿ. ಹಿರೇಮಠ ಗುಡದೂರು, ಟೂರ್ನಮೆಂಟ್ ವ್ಯವಸ್ಥಾಪಕ ಧಮೇಂದ್ರ, ಉಪ್ಪೆಳಪ್ಪ, ಆಂಜನೇಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net