ಮಕ್ಕಳಿಗೆ ಪಾಲಕರ ಮಾರ್ಗದರ್ಶನ ಅಗತ್ಯ

Untitled design12111
Published on

ಸಿಂಧನೂರು: ಮಕ್ಕಳಿಗೆ ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ ನೀಡಬೇಕೆಂದು ಬೂದಗುಂಪಿ ಕೊಟ್ಟೂರು ವಿರಕ್ತಮಠದ ಶ್ರೀ ಸಿದ್ದೇಶ್ವರ ಶರಣ ಹೇಳಿದರು.

ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡ ಸದ್ಭಾವನೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸನಾತನ ಧರ್ಮ, ಏಕತೆಭಾವ ಮತ್ತು ನಾವೆಲ್ಲರೂ ಒಂದೇ ಎಂಬ ಸಿದ್ಧಾಂತ ಸಾರಲು ಪಾದಯಾತ್ರೆ ಮಾಡಲಾಗುತ್ತಿದೆ. ಯುವಕರು ದಾರಿ ತಪ್ಪುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಉತ್ತಮ ರೀತಿಯಲ್ಲಿ ಜೀವನ ಸಾಗಿಸಲು ಪಾಲಕರು ಮಾರ್ಗದರ್ಶನ ನೀಡಬೇಕು. ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು ಎಂದರು.

ಹಿರೇಮಠದ ಗುರುಬಸಯ್ಯಸ್ವಾಮಿ, ಚಂದ್ರಶೇಖರಯ್ಯಸ್ವಾಮಿ ಹಿರೇಮಠ, ಪ್ರಮುಖರಾದ ಹನುಮಪುರ್ ಕೆ., ನಾಗೋಜಿ ಮರಾಠಿ, ಹಂಚಿನಾಳ ಕೆ.ಬಸಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net