ವೀರಭದ್ರೇಶ್ವರ ಕಾರ್ತಿಕೋತ್ಸವ ಅದ್ದೂರಿ

Untitled design(7)
Published on

ಸಿಂಧನೂರು: ನಗರದ ಹಳೆಯ ಬಜಾರ್ ರಸ್ತೆಯಲ್ಲಿರುವ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಕಾರ್ತಿಕೋತ್ಸವ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ ರುದ್ರಾಭಿಷೇಕ, ಅಲಂಕಾರ, ಪುಷ್ಪಾರ್ಪಣೆ ಮತ್ತಿತರ ಧಾರ್ಮಿಕ ವಿಧಿವಿಧಾನಗಳು ನಡೆದವು. ನಂತರ ಹಿರೇಹಳ್ಳಕ್ಕೆ ತೆರಳಿ ಗಂಗೆ ಪೂಜೆ ನೆರವೇರಿಸಲಾಯಿತು. ವೀರಗಾಸೆ ನೃತ್ಯ, ಕುಂಭ-ಕಳಸ ಮೆರವಣಿಗೆ ಗಂಗೆ ಸ್ಥಳದಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಹಳೆಯ ಬಜಾರ್ ಮೂಲಕ ವೀರಭದ್ರೇಶ್ವವರ ದೇವಸ್ಥಾನಕ್ಕೆ ಬಂದು ತಲುಪಿತು. ಸಂಜೆ ವೀರಭದ್ರೇಶ್ವರ ಉಚ್ಛಾಯ ನಡೆಯಿತು.

ರೌಡಕುಂದ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಕಲ್ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಎಪಿಎಂಸಿಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ಚಂದ್ರಮೌಳೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ರಾಮನಗೌಡ ವಕೀಲ, ನಗರಸಭೆ ಸದಸ್ಯರಾದ ಚಂದ್ರಶೇಖರ ಮೈಲಾರ, ಮಾಜಿ ಅಧ್ಯಕ್ಷ ಕೆ.ಶರಣಪ್ಪ ತೆಂಗಿನಕಾಯಿ, ಪ್ರಮುಖರಾದ ಶಿವಕುಮಾರ ಜವಳಿ, ಶಿವಬಸನಗೌಡ ಹಚ್ಚೊಳ್ಳಿ, ಶಿವಕುಮಾರ, ವೀರೇಶ ಅಂತರಗಂಗಿ, ಶರಣಯ್ಯಸ್ವಾಮಿ ಹೊಕ್ರಾಣಿ, ವೀರೇಶ ಹಟ್ಟಿ, ವೀರೇಶ ಶಿಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net