ಭತ್ತಕ್ಕೆ ಹೆಚ್ಚುವರಿ ಸಹಾಯಧನ ನೀಡಿ

Untitled design (14)
ಸಿಂಧನೂರಿನಲ್ಲಿ ತಹಸೀಲ್ದಾರ್ ಅರುಣ್ ದೇಸಾಯಿಗೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಮನವಿ ಸಲ್ಲಿಸಿತು. ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ತಾಲೂಕು ಅಧ್ಯಕ್ಷ ನಿರುಪಾದೆಪ್ಪ, ಉಪಾಧ್ಯಕ್ಷ ರಾಮು ನಾಯಕ, ಪ್ರಮುಖರಾದ ಅಡಿವೆಪ್ಪ ಕೆಂಗಲ್, ಬಸವರಾಜ ಸುಲ್ತಾನಪುರ ಇತರರಿದ್ದರು.
Published on

ಸಿಂಧನೂರು: ಭತ್ತ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಗುರುವಾರ ತಹಸೀಲ್ದಾರ್ ಅರುಣ್ ದೇಸಾಯಿಗೆ ಮನವಿ ಸಲ್ಲಿಸಿತು.

ಈಗಾಗಲೇ ಜಿಲ್ಲೆಯಲ್ಲಿ ಭತ್ತ ಕಟಾವು ಆರಂಭಗೊಂಡಿದೆ. ಮಾರುಕಟ್ಟೆಯಲ್ಲಿ ಹೋದ ವರ್ಷಕ್ಕಿಂತ ಪ್ರಸ್ತುತ ಗಣನೀಯವಾಗಿ ಭತ್ತದ ಬೆಲೆ ಇಳಿಕೆಯಾಗಿದೆ. ಸರ್ಕಾರ ತಕ್ಷಣ ಭತ್ತ ಕರೆದ ಕೇಂದ್ರ ಆರಂಭಿಸಿ ರೈತರಿಗೆ ನಷ್ಟದ ಇಳಿಸಬೇಕು ಎಂದು ಆಗ್ರಹಿಸಿದರು.

ವಷರ್ದಿಂದ ವರ್ಷಕ್ಕೆ ಬೇಸಾಯದ ಖರ್ಚು ಹೆಚ್ಚಳವಾಗುತ್ತಿದೆ. ಎ ಗ್ರೇಡ್ ಕ್ವಿಂಟಾಲ್‌ಗೆ ಭತ್ತಕ್ಕೆ 2320 ರೂ., ಸಾಮಾನ್ಯ ಭತ್ತಕ್ಕೆ 2300 ರೂ.ಸರ್ಕಾರ ಬೆಂಬಲ ಬೆಲೆಯ ನೀಡುತ್ತಿದೆ. ಇದರ ಜತೆಗೆ ಪ್ರತಿ ಕ್ವಿಂಟಾಲ್ ಗೆ 500 ರೂ. ಹೆಚ್ಚುವರಿ ಸಹಾಯಧನ ನೀಡಬೇಕು. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ನದಿಗೆ ಒಳಹರಿವು ನವೆಂಬರ್‌ನಲ್ಲಿ ಕೂಡ ಉತ್ತಮ ರೀತಿಯಲ್ಲಿ ಇದೆ. ಕೂಡಲೇ ಐಸಿಸಿ ಸಭೆ ಕರೆದು ಎರಡನೇ ಬೆಳೆಗೆ ಏ.20 ವರೆಗೆ ನೀರು ಹರಿಸಲು ತೀರ್ಮಾನ ಮಾಡಬೇಕು. ಕಾಳ ಸಂತೆಯಲ್ಲಿ ರಸಗೊಬ್ಬರ ಮಾರಾಟ ಮಾಡುವುದನ್ನು ತಡೆಯಬೇಕು ಆಗ್ರಹಿಸಿದರು.

ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ, ತಾಲೂಕು ಅಧ್ಯಕ್ಷ ನಿರುಪಾದೆಪ್ಪ, ಉಪಾಧ್ಯಕ್ಷ ರಾಮು ನಾಯಕ, ಪ್ರಮುಖರಾದ ಅಡಿವೆಪ್ಪ ಕೆಂಗಲ್, ಬಸವರಾಜ ಸುಲ್ತಾನಪುರ, ಆಂಜನೇಯ ಅರಳಳ್ಳಿ, ದುರ್ಗಪ್ಪ, ಬಸನಗೌಡ, ಯಮನಪ್ಪ ಪಗಡದಿನ್ನಿ, ಶಾಮಿದ್‌ಸಾಬ, ಖಾದರಖಾನ್, ದೇವಣ್ಣ, ಅಮರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net