ಬಸ್‌ಗಳ ನಡುವೆ ಡಿಕ್ಕಿಯಾಗಿ ಚಾಲಕ ಸಾವು

Sindhanour bus accident1
ಹಾರಾಪುರ ಬಳಿ ಕಕ ರಸ್ತೆ ಸಾರಿಗೆ ಬಸ್ ಹಿಂಬದಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದರಿಂದ ನುಜ್ಜು ಗುಜ್ಜಾಗಿರುವುದು.
Published on

ಸಿಂಧನೂರು: ತಾಲೂಕಿನ ಹಾರಾಪುರ ಗ್ರಾಮದ ಹೆದ್ದಾರಿಯಲ್ಲಿ ಕಕ ರಸ್ತೆ ಸಾರಿಗೆ ಬಸ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ್ದು ಚಾಲಕ ಮೃತಪಟ್ಟಿದ್ದಾನೆ. ಖಾಸಗಿ ಬಸ್ ಚಾಲಕ ಪುಂಡಲೀಕ(55) ಮೃತ.

ಬೆಂಗಳೂರಿನಿಂದ ಯಾದಗಿರಿಗೆ ಹೊರಟಿದ್ದ ಸಾರಿಗೆ ಬಸ್ ಪ್ರಯಾಣಿಕರೊಬ್ಬರನ್ನು ಇಳಿಸಲು ಚಾಲಕ ಹಾರಾಪುರದಲ್ಲಿ ನಿಲ್ಲಿಸಿದ್ದರು. ಈ ವೇಳೆ ಕಲಬುರಗಿ ಕಡೆ ಹೊರಟಿದ್ದ ಖಾಸಗಿ ಟ್ರಾವೆಲ್ಸ್‌ನ ಬಸ್ ಸಾರಿಗೆ ಬಸ್‌ಗೆ ಹಿಂಬದಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ರಭಸಕ್ಕೆ ಸಾರಿಗೆ ಬಸ್ ರಸ್ತೆ ಬದಿ ಉರುಳಿ ಬಿದ್ದಿದ್ದು, ಜಖಂಗೊಂಡಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net