ಶ್ರೀ ಶರಣಬಸವೇಶ್ವರ ರಥೋತ್ಸವ ಸಂಪನ್ನ

K Hosalli Fair
ಸಿಂಧನೂರು ತಾಲೂಕಿನ ಕೆ.ಹೊಸಳ್ಳಿಯಲ್ಲಿ ಶ್ರೀ ಶರಣಬಸವೇಶ್ವರ ರಥೋತ್ಸವ ಭಾನುವಾರ ನಡೆಯಿತು.
Published on

ಸಿಂಧನೂರು: ಕೆ.ಹೊಸಳ್ಳಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ರಥೋತ್ಸವ ಭಾನುವಾರ ಸಂಪನ್ನಗೊಂಡಿತು. ಬೆಳಗ್ಗೆ ಶ್ರೀ ಶರಣಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ, ಮಹಾರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರಿದವು. ನಂತರ 108 ಕುಂಭ-ಕಳಸ ಮೆರವಣಿಗೆಯೊಂದಿಗೆ ಗಂಗಾಸ್ಥಳಕ್ಕೆ ಹೋಗಿ ಬರಲಾಯಿತು. ಸಂಜೆ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಮುತ್ತಗಯ್ಯಸ್ವಾಮಿ ಹಿರೇಮಠ, ದೊಡ್ಡಬಸನಗೌಡ ಮಾ.ಪಾ., ಪಂಪಾಪತೆಪ್ಪ ಕೆಸರಟ್ಟಿ, ತಿಮ್ಮನಗೌಡ ಮಾ.ಪಾ., ಭೀಮನಗೌಡ ಹಳೇಮನಿ, ತಿಮ್ಮಾರಡ್ಡೆಪ್ಪ ಜೀನೂರು, ಸತ್ಯಪ್ಪ ಕೆಸರಟ್ಟಿ, ಮಲ್ಲಪ್ಪ ಕಲ್ಮಂಗಿ, ಬಸನಗೌಡ ಪೊ.ಪಾ., ಅಂಬಣ್ಣ ಬಡಿಗೇರ, ಮಲ್ಲಪ್ಪ ಹೂಗಾರ, ನಾಗಪ್ಪ ಬಡಿಗೇರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net