ಸಿಂಧನೂರು: ನಗರದ ಒಳಬಳ್ಳಾರಿ ರಸ್ತೆಯ ಜೋಳದರಾಶಿ ಶ್ರೀ ಆಂಜನೇಯ ಜಾತ್ರೆ ಏ.11 ಮತ್ತು 12 ರಂದು ಜರುಗಲಿದೆ ಎಂದು ಜೋಳದರಾಶಿ ಆಂಜನೇಯ ಟ್ರಸ್ಟ್ ಅಧ್ಯಕ್ಷ ರಮೇಶ ಯಾದವ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.11 ರಂದು ಎಪಿಎಂಸಿ ಗಣೇಶ ದೇವಸ್ಥಾನದಿಂದ ಒಳಬಳ್ಳಾರಿ ರಸ್ತೆ ಕ್ರಾಸ್‌ವರೆಗೆ ಶೋಭಾಯಾತ್ರೆ ನಡೆಯಲಿದೆ. ಡೊಳ್ಳು, ಚಂಡಿ ಮೇಳ, ಕಂಚಿ ಮೇಳ, ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯ ವೇಷಧಾರಿಗಳು, ಕಲಾ ತಂಡಗಳು ಭಾಗಿಯಾಗಲಿವೆ. ಏ.12 ರಂದು ಶ್ರೀ ಗಂಗೆ ಪೂಜೆ, ಕಳಸಾರೋಹಣ ನೆರವೇರಲಿದೆ. ನಂತರ ಕೊಪ್ಪಳ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರು ನೂತನ ರಥವನ್ನು ಉದ್ಘಾಟಿಸುವರು. ಕನಕ ಗುರುಪೀಠದ ಸಿದ್ಧರಾಮನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಜೆ ರಥೋತ್ಸವ ಅದ್ದೂರಿಯಾಗಿ ಜರುಗಲಿದೆ. ಸುಕಾಲಪೇಟೆ ನಂಜುಂಡಯ್ಯ ತಾತ, ತುರ್ವಿಹಾಳ ಅಮೋಘಸಿದ್ಧೇಶ್ವರ ಮಠದ ಮಾದಯ್ಯ ಗುರುವಿನ್, ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಅಂಕಲಿಮಠದ ವೀರಭದ್ರ ಸ್ವಾಮೀಜಿ, ಬಂಗಾರಿಕ್ಯಾಂಪ್ ಸದಾನಂದ ಶರಣರು ಒಳಬಳ್ಳಾರಿ ಸಿದ್ಧಲಿಂಗ ಸ್ವಾಮೀಜಿ, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಉಟಕನೂರು ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆಂದರು.
ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಗಂಗಾವತಿ ಶಾಸಕ ಜನಾರ್ದನ ರಡ್ಡಿ, ಮಾಜಿ ಸಚಿವರಾದ ವೆಂಕಟರಾವ ನಾಡಗೌಡ, ಬಿ.ಶ್ರೀರಾಮುಲು, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಎಂಎಲ್‌ಸಿ ಬಸನಗೌಡ ಬಾದರ್ಲಿ ಸೇರಿ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು, ನಗರಸಭೆ ಅಧ್ಯಕ್ಷರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ಟ್ರಸ್ಟ್ ಉಪಾಧ್ಯಕ್ಷ ಮಲ್ಲಿಕಾರ್ಜುನ, ಕಾರ್ಯದರ್ಶಿ ಶ್ರೀನಿವಾಸ ವೈ., ಶಿವಕುಮಾರ, ರಾಘವೇಂದ್ರ, ಎಚ್.ಹಿರೇಲಿಂಗಪ್ಪ, ಮಂಜುನಾಥ ಬಾದಾಮಿ, ಹಿರೇಲಿಂಗಪ್ಪ, ದುರುಗಪ್ಪ, ವೆಂಕಟೇಶ ನಾಯಕ, ಶಿವಪ್ಪ ಮೇಸ್ತ್ರಿ, ಕಾಳಪ್ಪ ಮೇಸ್ತ್ರಿ, ವಿನೋದಕುಮಾರ, ಸೋಮಶೇಖರಗೌಡ ಇದ್ದರು.