

ಸಿಂಧನೂರು: ಇಬ್ಬರು ಮಹಿಳೆಯರು ಮೃತಪಟ್ಟ ಅಪಘಾತ ಪ್ರಕರಣದಲ್ಲಿ ಆರೋಪ ಸಾಬೀತರಾಗಿದ್ದರಿಂದ ಮೊದಲನೇಯ ಅಪರಾಧಿ ಹನುಮಂತಪ್ಪಗೆ 6 ತಿಂಗಳ ಕಾರಾಗೃಹ ಶಿಕ್ಷೆ , 13 ಸಾವಿರ ರೂ. ದಂಡ ಹಾಗೂ ಎರಡನೇಯ ಅಪರಾಧಿ ದುರುಗಪ್ಪಗೆ 4 ಸಾವಿರ ರೂ. ದಂಡ ವಿಧಿಸಿ ನಗರದ 2ನೇ ಹೆಚ್ಚುವರಿ ಸಿವಿಎಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
2022 ಜ.5 ರಂದು ತಾಲೂಕಿನ ಗೊರೇಬಾಳ ಬಸ್ ನಿಲ್ದಾಣದ ಸಮೀಪದ ಪಂಕ್ಚರ್ ಶಾಪ್ ಬಳಿ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದರಿಂದ ಬಸಲಿಂಗಮ್ಮ, ಉಮಾದೇವಿ ಅವರು ಮೃತಪಟ್ಟಿದ್ದರು. ಪ್ರಕರಣ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ದಾಖಲಾಗಿತ್ತು. ತನಿಖೆ ನಡೆಸಿದ ಸಿಪಿಐ ಉಮೇಶ ಎಸ್.ಕಾಂಬ್ಳೆ, ಪಿಎಸ್‌ಐ ಯರಿಯಪ್ಪ, ಲಕ್ಷ್ಮೀಕಾಂತ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಧೀಶೆ ರೂಪಾ ಚನ್ನಮಲ್ಲಪ್ಪ ವಗ್ಗ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಸಹಾಯಕ ಅಭಿಯೋಜಕ ರಾಜಕುಮಾರ ವಾದ ಮಂಡಿಸಿದ್ದರು.