ವಿದ್ಯುತ್ ಪರಿವರ್ತಕದ ವೈಯರ್ ಸ್ಥಳಾಂತರಿಸಿ

17092022 Sindhanoor news
Published on

ಸಿಂಧನೂರು: ನಗರದ ಮಹೆಬೂಬಿಯಾ ಕಾಲನಿಯಲ್ಲಿ ವಿದ್ಯುತ್ ಪರಿವರ್ತಕದ ವೈಯರ್ ನೆಲಮಟ್ಟದಲ್ಲಿದ್ದು, ಅಪಾಯ ತಪ್ಪಿಸಲು ಕ್ರಮಕೈಗೊಳ್ಳಬೇಕೆಂದು ಜೆಸ್ಕಾಂ ಎಇಇ ಮಲ್ಲಿಕಾರ್ಜುನಗೆ ಕುಳುವ ಮಹಾಸಂಘ ತಾಲೂಕು ಘಟಕದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಪ್ರದೇಶದಲ್ಲಿ ವೈಯರ್ ಇಳಿ ಬಿದ್ದಿರುವುದರಿಂದ ಜನರು ಭಯದಲ್ಲಿ ಸಂಚರಿಸುವಂತಾಗಿದೆ. ಈಗಾಗಲೇ ಕೆಲವು ಬಾರಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಅನಾಹುತ ಸಂಭವಿಸಿಲ್ಲ. ನಾಲ್ಕೈದು ಬಾರಿ ಈ ಬಗ್ಗೆ ಮನವರಿಕೆ ಮಾಡಿದರೂ ಪ್ರಯೋಜನ ಶೂನ್ಯವಾಗಿದೆ. ಈ ಕುರಿತು ಪರಿಶೀಲಿಸಿ ವೈಯರ್ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.

ನಿವಾಸಿಗಳಾದ ಗೋವಿಂದಪ್ಪ, ರಾಮಣ್ಣ ಕಾರಟಗಿ, ಬಸವರಾಜ ಸಂಕೇಶ್ವರ, ದಸ್ತಗಿರಿಸಾಬ್, ಆದಯ್ಯಸ್ವಾಮಿ, ಹುಲ್ಲಪ್ಪ ಕುರುಕುಂದಿ, ಗುಂಡಪ್ಪ, ಹನುಮಂತ, ಪರಮೇಶಪ್ಪ, ಬುಡ್ಡಪ್ಪ, ಕನಕಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net