ವಿವಾದಗಳನ್ನು ಸೃಷ್ಟಿಸಿ ಒಡೆದಾಳುವ ನೀತಿ ಸಲ್ಲ

20082022 Sindhanoor jds news
Published on

ಸಿಂಧನೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಅದು ಬಿಟ್ಟು ಇಲ್ಲಸಲ್ಲದ ವಿಚಾರಗಳಿಗೆ ನಿಮ್ಮ ಅಧಿಕಾರ ಬಳಸಿಕೊಳ್ಳಬಾರದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

ನಗರದ ಯಲಮಂಚಲಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆರ್‌ಎಸ್‌ಎಸ್‌ನವರು ಹಿಜಾಬ್, ಜಟಕಾಕಟ್, ಹಲಾಲ್‌ಕಟ್, ಬುರುಕಾದಂಥ ಸೂಕ್ಷ್ಮ ವಿಷಯಗಳನ್ನು ವಿವಾದವಾಗಿ ಸೃಷ್ಟಿಸಿ ಜನರನ್ನು ಒಡೆದಾಳುವ ನೀತಿ ಅನುಸರಿಸುತ್ತಿರುವುದು ಸರಿಯಲ್ಲ. ಭಾವನಾತ್ಮಕ ವಿಷಯ ಕೆದಕಿ ರಾಜಕೀಯ ಮಾಡುವುದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಬಾದಾಮಿ ಕ್ಷೇತ್ರಕ್ಕೆ ಕರೆತಂದವನೇ ನಾನು. ಆದರೆ ನನ್ನನ್ನು ಮರೆತು ಸೂಟ್‌ಕೇಸ್ ಕೊಟ್ಟವರನ್ನು ಬೆಂಬಲಿಸಿದರು ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net