ಜನಿವಾರ ತೆಗೆಸಿದ ಪ್ರಕರಣಗಳು ಮರುಕಳಿಸದಿರಲಿ

ಸಿಂಧನೂರಿನಲ್ಲಿ ಉಪ ತಹಸೀಲ್ದಾರ್ ಚಂದ್ರಶೇಖರಗೆ ಬ್ರಾಹ್ಮಣ ಸಮಾಜದ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ, ಕಾರ್ಯದರ್ಶಿ ಆನಂದ ಗೌರಕರ್, ನರಸಿಂಹಾಚಾರ್ ಮಠಾಧಿಕಾರ್ ಇತರರಿದ್ದರು.
ಸಿಂಧನೂರಿನಲ್ಲಿ ಉಪ ತಹಸೀಲ್ದಾರ್ ಚಂದ್ರಶೇಖರಗೆ ಬ್ರಾಹ್ಮಣ ಸಮಾಜದ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ, ಕಾರ್ಯದರ್ಶಿ ಆನಂದ ಗೌರಕರ್, ನರಸಿಂಹಾಚಾರ್ ಮಠಾಧಿಕಾರ್ ಇತರರಿದ್ದರು.
Published on

ಸಿಂಧನೂರು: ಶಿವಮೊಗ್ಗ ಹಾಗೂ ಬೀದರ್‌ನ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ತಾಲೂಕು ಬ್ರಾಹ್ಮಣ ಸಮಾಜ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ಬ್ರಾಹ್ಮಣರನ್ನು ಅವಮಾನಿಸುವುದನ್ನು ಅನೇಕರು ರೂಢಿಸಿಕೊಂಡಿದ್ದಾರೆ. ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋದಾಗ ವಿದ್ಯಾರ್ಥಿಯ ಜನಿವಾರ ತೆಗೆಯುವಂತೆ ಒತ್ತಾಯಿಸಿದ ಘಟನೆಯಿಂದ ಮನನೊಂದ ಆ ವಿದ್ಯಾರ್ಥಿ ಜನಿವಾರ ತೆಗೆಯಲು ನಿರಾಕರಿಸಿ, ಪರೀಕ್ಷೆ ಬರೆಯದೆ ಮನೆಗೆ ಹೋಗಿದ್ದಾನೆ. ಈ ಕುರಿತು ರಾಜ್ಯಾದ್ಯಂತ ಖಂಡನೆ ವ್ಯಕ್ತವಾಗಿದೆ. ನಂತರ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆ ವಿದ್ಯಾರ್ಥಿಗೆ ತಮ್ಮ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಚಿತ ಸೀಟು ನೀಡಿದ್ದಾರೆ. ಅಲ್ಲದೆ, ಜನಿವಾರ ತೆಗೆಸಿದ ಪ್ರಕರಣಕ್ಕೆ ಕಾರಣರಾದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ. ಆದರೆ ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸರ್ಕಾರ ಕೂಡ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಮನೆ ಮನೆಗೆ ತೆರಳಿ ಸರಿಯಾದ ಅಂಕಿ ಅಂಶಗಳನ್ನು ದಾಖಲಿಸದೆ, ರಾಜ್ಯದಲ್ಲಿ 45 ಲಕ್ಷಕ್ಕೂ ಹೆಚ್ಚಿರುವ ಬ್ರಾಹ್ಮಣರ ಜನಸಂಖ್ಯೆಯನ್ನು ಡಾ.ಜಯಪ್ರಕಾಶ್ ಹೆಗ್ಡೆ ಅವರು ಸಲ್ಲಿಸಿರುವ ವರದಿಯಲ್ಲಿ 15 ಲಕ್ಷ ಮಾತ್ರ ನಮೂದಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಗೋವಿಂದರಾವ್ ಕುಲಕರ್ಣಿ, ಕಾರ್ಯದರ್ಶಿ ಆನಂದ ಗೌರಕರ್, ನರಸಿಂಹಾಚಾರ್ ಮಠಾಧಿಕಾರ್, ನಗರಸಭೆ ಮಾಜಿ ಸದಸ್ಯ ವೆಂಕಟರಾವ (ರಾಜು ಬಂಡಿ), ಪ್ರಮುಖರಾದ ಪಂಡಿತ್ ರಂಗನಾಥಾಚಾರ್ ಸಾಲಗುಂದ, ಮನೋಹರರಾವ್ ಕುಲಕರ್ಣಿ, ಜಿ.ವಿ.ಜೋಶಿ, ಕಿಶನ್‌ರಾವ್ ಕುಲಕರ್ಣಿ, ವೆಂಕಟರಾವ್ ಚನ್ನಳ್ಳಿ, ಹನುಮಂತ ಆಚಾರ್ ಬಾದರ್ಲಿ, ಕೆಂಗಲ್ ವೆಂಕಟೇಶಾಚಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net