ಕಾನೂನು ಉಲ್ಲಂಘಿಸಿದರೆ ಕ್ರಮ

Sindhanour Holi habba premeeting
ಸಿಂಧನೂರಿನ ಶಹರ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಪಿಐ ದುರುಗಪ್ಪ ಮಾತನಾಡಿದರು. ಪಿಎಸ್‌ಐ ಬೆಟ್ಟಪ್ಪ ಇದ್ದರು.
Published on

ಸಿಂಧನೂರು: ನಗರ ಶಾಂತಿ, ಸಾಮರಸ್ಯಕ್ಕೆ ಹೆಸರಾದ ಊರಾಗಿದ್ದು, ಹೋಳಿ ಹಬ್ಬವನ್ನು ಶಾಂತಿ, ಸೌಹಾರ್ದದಿಂದ ಆಚರಿಸಬೇಕೆಂದು ಸ್ಥಳೀಯ ಠಾಣೆ ಪಿಐ ದುರುಗಪ್ಪ ಹೇಳಿದರು.

ನಗರದ ಶಹರ ಪೊಲೀಸ್ ಠಾಣೆಯಲ್ಲಿ ಸೋಮವಾರ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದರು. ಯಾವುದೇ ಹಬ್ಬಗಳಿರಲಿ ಸಂತಸ, ಸೌಹಾರ್ದದಿಂದ ಆಚರಿಸಿದರೆ, ಪೊಲೀಸರ ಮಧ್ಯಸ್ತಿಕೆ ಅಗತ್ಯವಿರಲ್ಲ. ಆದ್ದರಿಂದ ಶಾಂತಿ ಕದಡದಿರಿ. ಕಾರು, ಬೈಕ್, ಬಸ್ ಸೇರಿ ವಾಹನಗಳನ್ನು ನಿಲ್ಲಿಸಿ ಬಣ್ಣ ಎರಚಬಾರದು. ಹಣ ವಸೂಲಿ ಮಾಡಬಾರದು. ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ದಸಂಸ ಸಂಘಟನೆ ಹಿರಿಯ ಸಂಚಾಲಕ ಎಚ್.ಎನ್.ಬಡಿಗೇರ್ ಮಾತನಾಡಿ, ಹಬ್ಬಗಳನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿ ಎತ್ತಿ ಹಿಡಿಯಬೇಕು. ಅನ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು. ಶಾಂತಿಯಿಂದ ಹಬ್ಬ ಆಚರಿಸೋಣ ಎಂದರು. ಕ್ರೈಂ ವಿಭಾಗದ ಪಿಎಸ್‌ಐ ಬೆಟ್ಟಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್ ವಕೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net