ಅರ್ಧದಿನ ಅಂಗಡಿಗಳ ಬಂದ್‌ಗೆ ನಿರ್ಧಾರ

06072020 Sindhanoor Merchants Appele
Published on

ಅವಕಾಶ ಮಾಡಿಕೊಡುವಂತೆ ತಹಸೀಲ್ದಾರ್‌ಗೆ ವ್ಯಾಪಾರಸ್ಥರ ಮನವಿ

ಸಿಂಧನೂರು: ನಗರದಲ್ಲಿ ತಿಂಗಳವರೆಗೆ ಮಧ್ಯಾಹ್ನದ ನಂತರ ಎಲ್ಲ ಅಂಗಡಿಗಳನ್ನು ಬಂದ್ ಮಾಡಲು ಸ್ವಯಂ ನಿರ್ಧಾರ ಕೈಗೊಂಡಿದ್ದು, ಅವಕಾಶ ಮಾಡಿಕೊಡುವಂತೆ ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಶಾಸಕ ವೆಂಕಟರಾವ ನಾಡಗೌಡ ನೇತೃತ್ವದಲ್ಲಿ ವ್ಯಾಪಾರಸ್ಥರು ಮನವಿ ಸಲ್ಲಿಸಿದರು.

ನಗರ ಸೇರಿ ತಾಲೂಕಾದ್ಯಂತ ಕೋವಿಡ್-19 ಮಹಾಮಾರಿ ಹೆಚ್ಚುತ್ತಿದೆ. ಸಮುದಾಯಕ್ಕೆ ಹರಡುವ ಸಾಧ್ಯತೆ ಇರುವುದರಿಂದ ನಾವೆಲ್ಲ ಅತೀ ಮುನ್ನಚ್ಚರಿಕೆ ಕ್ರಮಗಳು ಅನುರಿಸುವುದು ಅತ್ಯಗತ್ಯವಾಗಿದೆ. ಅಂಗಡಿ-ಮುಂಗಟ್ಟುಗಳಿಗೆ ಹೆಚ್ಚಿನ ಜನರು ಸೇರಿಕೊಳ್ಳುವುದರಿಂದ ತೊಂದರೆಯಾಗಬಹುದು. ಈ ಹಿನ್ನೆಲೆಯಲ್ಲಿ ಬೆ.8ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ಎಲ್ಲ ತರಹದ ಅಂಗಡಿ-ಮುಂಗಟ್ಟುಗಳನ್ನು ತೆರೆದು, ನಂತರ ಮರುದಿನ ಬೆ.8ರವರೆಗೆ ಬಂದ್ ಮಾಡಲು ಸ್ವಯಂಕೃತವಾಗಿ ವ್ಯಾಪಾರಿಗಳು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಲಾಯಿತು.

ಶಾಸಕ ವೆಂಕಟರಾವ ನಾಡಗೌಡ, ಗಂಜ್ ವರ್ತಕರ ಸಂಘದ ಅಧ್ಯಕ್ಷ ಮಲ್ಲನಗೌಡ ಕಾನಿಹಾಳ, ರಸಗೊಬ್ಬರ ಹಾಗೂ ಕ್ರಿಮಿನಾಶಕ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎನ್.ಸಣ್ಣ ಭೀಮನಗೌಡ ಗೊರೇಬಾಳ, ಸಂಜಯ ಕುಮಾರ, ರೈಸಮಿಲ್ ಸಂಘದ ಅಧ್ಯಕ್ಷ ಸುಬ್ಬಾರಾವ್, ಪ್ರಸಾದ, ಕೆ.ರಾಜಶೇಖರ, ವೆಂಕಟರಾವ್, ರಾಜೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net