

ಸಿಂಧನೂರು: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರಿಂದ ಕಲಿಕಾಸಕ್ತಿಯು ಮೂಡಲಿದೆ ಎಂದು ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡ ಹೇಳಿದರು.
ತಾಲೂಕಿನ ಗುಂಜಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಸೇವಾದಳದ ಅಡಿಯಲ್ಲಿ ಐಪಿಎಸ್ ಸೇವಾ ಸಮಿತಿ ಉದ್ಘಾಟಿಸಿ ಮಾತನಾಡಿದರು.
ಐಪಿಎಸ್ ಸೇವಾ ಸಂಘಟನೆಯು ವಿವಿಧ ಗ್ರಾಮಗಳಲ್ಲಿ ಸೇವೆ ಮಾಡುವ ಗುರಿ ಹೊಂದಿದೆ. ಇದರಿಂದ ಮಕ್ಕಳಲ್ಲಿಯೂ ಸೇವಾ ಗುಣಗಳು ಬೆಳೆಯಲಿವೆ. ಕೇವಲ ಪಠ್ಯಕ್ಕೆ ಸೀಮಿತವಾಗದೆ, ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಎಲ್ಲ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದರು.
ಶಾಲಾ ಮುಖ್ಯಶಿಕ್ಷಕ ನಾಗಪ್ಪ ಮಾತನಾಡಿ, ಪ್ರತಿಯೊಂದು ಊರಿಗೆ ತೆರಳಿ ಅಲ್ಲಿ ಗುಡಿ ಗುಂಡಾರ ಸರ್ಕಾರಿ ಶಾಲೆ ಸ್ವಚ್ಛತೆಯನ್ನು ಪ್ರತಿ ಭಾನುವಾರ ಮಾಡಲಾಗುವುದು. 9 ಹಾಗೂ 10 ನೇ ತರಗತಿ ಮಕ್ಕಳು ಪಾಲ್ಗೊಳ್ಳಲಿದ್ದಾರೆ ಎಂದರು.
ಸೇವಾದಳದ ಧ್ಯೇಯೋದ್ದೇಶಗಳ ಬಗ್ಗೆ ಶಿಕ್ಷಕ ಬಸವರಾಜ ತಿಳಿಸಿದರು. ಎಸ್ಡಿಎಂಸಿ ಅಧ್ಯಕ್ಷ ಕುದನ್‌ಸಾಬ, ಮಂಗಳಮುಖಿ ಜಮುನಾ, ಪ್ರಮುಖರಾದ ಕಾಳಿಂಗರೆಡ್ಡಿ ಸಾಸಲಮರಿ, ಕ್ರಾಂತಿ ಕುಮಾರ, ಚನ್ನಬಸವಸ್ವಾಮಿ, ಪಂಪಯ್ಯಸ್ವಾಮಿ ಇದ್ದರು. ಐಪಿಎಸ್ ಸೇವಾ ಸಮಿತಿಗೆ ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡ 11 ಸಾವಿರ ರೂ. ದೇಣಿಗೆ ನೀಡಿದರು.