

ಸಿಂಧನೂರು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ಶುಕ್ರವಾರ ಗ್ರೇಡ್ 2 ತಹಸೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಲಾಯಿತು.
ಮನುವಾದಿ-ಜಾತಿವಾದಿ-ಸನಾತನ ಮನಸ್ಥಿತಿಯ ವಕೀಲನೊಬ್ಬ ಕೋರ್ಟ್ ಕಲಾಪದ ಸಮಯದಲ್ಲೇ ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್.ಗವಾಯಿ ಅವರತ್ತ ಶೂ ಎಸೆಯಲು ಯತ್ನಿಸಿದ್ದು ಹೇಯ ಕೃತ್ಯವಾಗಿದೆ. ಈ ಆಘಾತಕಾರಿ ಘಟನೆ ಖಂಡನೀಯ.
ಕೂಡಲೇ ತಪ್ಪಿತಸ್ಥನನ್ನು ಬಂಧಿಸಿ ದೇಶದ್ರೋಹ ಕೇಸ್ ದಾಖಲಿಸಿ ಶಿಕ್ಷಿಸಬೇಕು. ಗವಾಯಿ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು, ಇಂಥ ದುಷ್ಕೃತ್ಯಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಇ.ಎಚ್.ನಾಯಕ ಎಲೆಕೂಡ್ಲಿಗಿ, ದುರುಗೇಶ ಸಾಬಾಳ, ಯಲ್ಲಾಲಿಂಗಪ್ಪ, ನಿರುಪಾದಿ, ರಾಜೇಶ್, ರಮೇಶ, ಹುಲ್ಲೇಶ, ಚಂದಪ್ಪ, ಸುರೇಶ ಇದ್ದರು.