ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ

background
Published on

ಸಿಂಧನೂರು: ಸರ್ಕಾರಿ ನೌಕರರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸುವ ಕಾರ್ಯ ಮಾಡುವೆ ಎಂದು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಿರೇಮಠ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ರಾಯಚೂರು ಹಾಗೂ ಚೆಲುವ ಚಿಣ್ಣರು ಮಕ್ಕಳ ಸಾಹಿತ್ಯ ಪತ್ರಿಕೆ, ಶಿಕ್ಷಕರ ಬಳಗದಿಂದ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ಚುನಾವಣೆಯಲ್ಲಿ ವಿಜೇತರಾದ ಅಧ್ಯಕ್ಷ ಹಾಗೂ ನಿರ್ದೇಶಕರ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು. ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವೆ ಎಂದರು. ಮುಖ್ಯಶಿಕ್ಷಕ ಶಂಕರ ದೇವರು ಹಿರೇಮಠ ಮಾತನಾಡಿದರು.

ರಾಜ್ಯ ಪರಿಷತ್ ಸದಸ್ಯ ದೊಡ್ಡ ನಿಂಗಪ್ಪ, ಕಾರ್ಯದರ್ಶಿ ಆನಂದ ಮೋಹನ, ಖಜಾಂಚಿ ವೀರನಗೌಡ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಪರಸಪ್ಪ, ಬಸವರಾಜ ಜವಳಗೇರಾರನ್ನು ಸನ್ಮಾನಿಸಲಾಯಿತು.

ಶಿಕ್ಷಕರಾದ ಸಂಗಮೇಶ ಕೋಟೆ, ರವಿಕುಮಾರ, ಸಿಆರ್‌ಪಿ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಅಂಗಡಿ, ಬಡ್ತಿ ಮುಖ್ಯಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಜಗದೀಶ ನಂದಿ, ಪ್ರಮುಖರಾದ ಶಾಂತರಾಜ, ಮೋಹನರಾಮಕೃಷ್ಣ, ಆನಂದ ಮಾಂಡ್ರೆ, ತಾಲೂಕು ಎನ್‌ಪಿಎಸ್ ಸಂಘದ ಅಧ್ಯಕ್ಷ ದುರುಗಪ್ಪ ಗುಡದೂರ, ಸಿಆರ್‌ಪಿ ಸಂಘದ ಜಿಲ್ಲಾ ಅಧ್ಯಕ್ಷ ಜಗದೀಶ ಕಲಮಂಗಿ, ಕೃಷಿ ಇಲಾಖೆಯ ವೀರೇಶ, ಶಿಕ್ಷಕರಾದ ಹಾಸಿಮ್, ಹುಸೇನಪ್ಪ ಗೊರೆಬಾಳ, ನಂದೀಶ, ಸಿದ್ದಲಿಂಗಯ್ಯ, ಗಿರೀಶ, ವೀರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net