ಸಿಂಧನೂರು ಸರ್ಕಾರಿ ಮಹಾವಿದ್ಯಾಲಯಕ್ಕೆ ಬಿ ಪ್ಲಸ್ ಶ್ರೇಣಿ

17022023 sindhanour government college
Published on

ಸಿಂಧನೂರು: ನಗರದ ಸರ್ಕಾರಿ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಾಂಕ ಮತ್ತು ಮಾನ್ಯತಾ ಮಂಡಳಿ(ನ್ಯಾಕ್) ಬಿ ಪ್ಲಸ್ ಶ್ರೇಣಿ ನೀಡಿದೆ.

ಕಾಲೇಜಿನಲ್ಲಿನ ಮೂಲಸೌಕರ್ಯ, ಕಲಿಕಾ ಗುಣಮಟ್ಟ, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿ ಸಂಖ್ಯೆ, ಪಠ್ಯೇತರ ಚಟುವಟಿಕೆ ಪರಿಗಣಿಸಿ ನ್ಯಾಕ್ ತಂಡ 2.63 ಅಂಕ ನೀಡಿದೆ. ಈ ಹಿಂದೆ ಈ ಕಾಲೇಜ್ ಬಿ ಶ್ರೇಣಿ ಹೊಂದಿತ್ತು. ಇದಕ್ಕಿಂತ ಉತ್ತಮ ಗ್ರೇಡ್ ಪಡೆಯಬೇಕೆಂಬ ಛಲದಿಂದ ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ನಡೆಸಿದ ಪ್ರಯತ್ನಕ್ಕೆ ಫಲ ಸಿಕ್ಕಿದೆ. ತಾಲೂಕು ಕೇಂದ್ರಕ್ಕೆ ಗ್ರಾಮೀಣ ಭಾಗದಿಂದ ಬಸ್ ಸಂಪರ್ಕ ಚೆನ್ನಾಗಿರುವುದರಿಂದ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿಯೇ ಅತ್ಯಂತ ಹಳೆಯದಾದ ಮಹಾವಿದ್ಯಾಲಯ ಇದಾಗಿದ್ದು, 53 ವಸಂತಗಳನ್ನು ಪೂರೈಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net