ಶಾಂತಿಯುತವಾಗಿ ಹಬ್ಬ ಆಚರಿಸಿ

UNTILETED (4)
ತುರ್ವಿಹಾಳ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಪಿಎಸ್‌ಐ ಸುಜಾತಾ ಮಾತನಾಡಿದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಮಿದ್‌ಸಾಬ್, ತಾಪಂ ಮಾಜಿ ಸದಸ್ಯ ಉಮರ್ ಸಾಬ್, ಯಲ್ಲಪ್ಪ ಭೋವಿ, ಅಬುತುರಾಬ್ ಖಾಜಿ, ಮಲ್ಲಪ ್ಪ ಕಾನಿಹಾಳ, ಫಕೀರಪ್ಪ ಭಂಗಿ, ಮಹಾಂತೇಶ ಸಜ್ಜನ, ಹನುಮಂತಗೌಡ ಇದ್ದರು.
Published on

ಸಿಂಧನೂರು: ಗಣೇಶ, ಈದ್-ಮಿಲಾದ್ ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸಬೇಕೆಂದು ಪಿಎಸ್‌ಐ ಸುಜಾತಾ ಹೇಳಿದರು.

ತುರ್ವಿಹಾಳ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬದಲ್ಲಿ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಆಯೋಜಕರು ಗಣೇಶ ಮೂರ್ತಿ ವಿಸರ್ಜನೆ ಮಾರ್ಗ ಹಾಗೂ ದಿನವನ್ನು ಕಡ್ಡಾಯವಾಗಿ ಸೂಚಿಸಬೇಕು. ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದ್ದು, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು. ಡಿ.ಜೆ. ನಿಷೇಧಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಹಬ್ಬಗಳನ್ನು ಶಾಂತಿಯುತವಾಗಿ ಕಾನೂನಿನ ಚೌಕಟ್ಟಿನಲ್ಲಿ ಆಚರಿಸಿ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಾಪುಗೌಡ ದೇವರಮನೆ ಮಾತನಾಡಿದರು. ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಶಾಮಿದ್‌ಸಾಬ್, ತಾಪಂ ಮಾಜಿ ಸದಸ್ಯ ಉಮರ್ ಸಾಬ್, ಪ್ರಮುಖರಾದ ಯಲ್ಲಪ್ಪ ಭೋವಿ, ಅಬುತುರಾಬ್ ಖಾಜಿ, ಮಲ್ಲಪ ್ಪ ಕಾನಿಹಾಳ, ಫಕೀರಪ್ಪ ಭಂಗಿ, ಮಹಾಂತೇಶ ಸಜ್ಜನ, ಹನುಮಂತಗೌಡ, ಮಾಳಪ್ಪ, ಕರಿಯಪ ್ಪ ಭಂಗಿ, ಅಭಿಗೌಡ ಪೊಲೀಸ್ ಪಾಟೀಲ್, ಮರಿಯಪ್ಪ, ರಾಮಣ್ಣ ಉಪ್ಪಾರ, ವಿರುಪಣ್ಣ ಹತ್ತಿಗುಡ್ಡ, ಮುರ್ತುಜಾ ಸಾಬ್, ಬಸವರಾಜ ಡಣಾಪುರ, ಹೊನ್ನೂರಪ್ಪ ಕುಂಬಾರ, ಯುನೂಸ್ ಖಾಜಿ, ಸೋಮು ಮಾದಪುರ, ಭೀಮ ದಾಸ ದಾಸರ್, ಕೊಮಾರೆಪ ್ಪ ಪವಾಡಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net